ಧೂಮಪಾನ ಮಾಡುವ ತಾಯಂದಿರ ಮಕ್ಕಳಲ್ಲಿ ಅಸ್ತಮಾ ಅಪಾಯ ದುಪ್ಪಟ್ಟು!

ಧೂಮಪಾನ ಮಾಡುವ ತಾಯಂದಿರ ಮಕ್ಕಳಲ್ಲಿ ಅಸ್ತಮಾ ಅಪಾಯ ದುಪ್ಪಟ್ಟು ಹೆಚ್ಚಾಗುತ್ತದೆ ಎಂದು ಹೊಸ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ.
ಧೂಮಪಾನ (ಸಾಂಕೇತಿಕ ಚಿತ್ರ)
ಧೂಮಪಾನ (ಸಾಂಕೇತಿಕ ಚಿತ್ರ)

ಜೈಪುರ್:ಧೂಮಪಾನ ಮಾಡುವ ತಾಯಂದಿರ ಮಕ್ಕಳಲ್ಲಿ ಅಸ್ತಮಾ ಅಪಾಯ ದುಪ್ಪಟ್ಟು ಹೆಚ್ಚಾಗುತ್ತದೆ ಎಂದು ಹೊಸ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ.

ಜರ್ನಲ್ ಆಫ್ ಅಸ್ತಮಾದಲ್ಲಿ ಪ್ರಕಟವಾದ ಲೇಖನದಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ತಾಯಿ ಧೂಮಪಾನ ಮಾಡುವುದರಿಂದ ಮಕ್ಕಳಲ್ಲಿ ಅಸ್ತಮಾ ಅಪಾಯ ದುಪ್ಪಟ್ಟು ಹೆಚ್ಚಾದರೆ ತಂದೆ ಧೂಮಪಾನ ಮಾಡುವುದರಿಂದ ಮಕ್ಕಳ ಮೇಲೆ 1 .29 -1 .9 ರಷ್ಟು ಹೆಚ್ಚಾಗುತ್ತದೆಯಂತೆ.
ವಾಯುಮಾಲಿನ್ಯ ಹಾಗೂ ಪರೋಕ್ಷ ಧೂಮಪಾನ( ಪ್ಯಾಸಿವ್ ಸ್ಮೋಕಿಂಗ್) ನಿಂದ ಅಸ್ತಮಾ ಸಮಸ್ಯೆ ಹೆಚ್ಚಾಗಲಿದೆ. ವಾಸಸ್ಥಳದ ಬಳಿ ಉಂಟಾಗುವ ವಾಯುಮಾಲಿನ್ಯದಿಂದ ಅಸ್ತಮಾ ಅಪಾಯ 1 .2 - 1 .7 ವರೆಗೆ ಹೆಚ್ಚಾಗುತ್ತದೆ ಎಂದು ಸಂಶೋಧನಾ ತಂಡದಲ್ಲಿದ್ದ ತಜ್ಞ ಡಾ.ಶೀತು ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com