

ಬೇಸಿಗೆ ಬಂತೆಂದರೆ ಸಾಕು ದಾಹ ನೀಗಿಸಿಕೊಳ್ಳಲು ಜನರು ಮೊದಲು ಮೊರೆ ಹೋಗುವುದು ತಂಪು ಪಾನೀಯಗಳ ಬಳಿಗೆ. ದಾಹದ ಸಮಯದಲ್ಲಿ ಯಾವ ಪಾನೀಯ ಒಳ್ಳೆಯದು ಯಾವು ಪಾನೀಯ ಹಾನಿಕಾರಕ ಎಂದು ಯೋಚಿಸುವವರ ಸಂಖ್ಯೆ ಬಹಳ ವಿರಳ. ಪಾನೀಯ ಸೇವನೆಗೆ ಬಹಳಷ್ಟು ಜನ ಅಂಗಡಿಗಳನ್ನೇ ಅವಲಂಬಿಸಿರುವುದನ್ನು ಪ್ರತಿ ನಿತ್ಯ ನಾವು ಕಾಣಬಹುದು.
ಅಂಗಡಿಗಳಲ್ಲಿ ಸಿಗುವ ಕೃತಕ ತಂಪುಪಾನೀಯಗಳನ್ನು ತೆಗೆದುಕೊಂಡು ಕುಡಿಯುವುದಂತೂ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಇಂತಹ ತಂಪು ಪಾನೀಯಗಳು ಆರೋಗ್ಯಕ್ಕೆ ಸಾಕಷ್ಟು ತೊಂದರೆಗಳನ್ನು ತಂದೊಡ್ಡುತ್ತದೆ ಎಂಬುದು ಎಷ್ಟೋ ಮಂದಿ ತಿಳಿದಿದ್ದರೂ ಅವುಗಳನ್ನು ಕುಡಿಯುವ ಚಟವನ್ನು ಮಾತ್ರ ಬಿಡುವುದೇ ಇಲ್ಲ.
ಸಾಧ್ಯವಾದಷ್ಟು ನಾವು ಅಂಗಡಿಗಳಲ್ಲಿ ಸಿಗುವ ತಂಪು ಪಾನೀಯಗಳನ್ನು ಬಿಟ್ಟು ಮನೆಯಲ್ಲೇ ಹಣ್ಣುಗಳು, ನಿಂಬೆ, ಮಜ್ಜಿಗೆಗಳನ್ನು ಬಳಸಿ ಪಾನೀಯ ತಯಾರಿಸಿ ಕುಡಿಯುವುದು ದೇಹಕ್ಕೆ ಮತ್ತು ಆರೋಗ್ಯಕ್ಕೆ ಬಹಳ ಒಳ್ಳೆಯದು.
ತಂಪು ಪಾನೀಯದಲ್ಲಿ ಸುಲಭವಾಗಿ ತಯಾರಿಸಿಕೊಳ್ಳಬಲ್ಲ ಪಾನೀಯವೆಂದರೆ ಅದು ನಿಂಬೆ ಪಾನಕ.ಈ ನಿಂಬೆ ಪಾನಕಕ್ಕೆ ಬಹಳ ಖರ್ಚು ಆಗುವುದಿಲ್ಲ. ಕಡಿಮೆ ಸಮಯದಲ್ಲೇ ವೇಗವಾಗಿ ತಯಾರಿಸಿಕೊಳ್ಳಬಹುದು.
ನಿಂಬೆ ಪಾನಕ ತಯಾರಿಸುವ ವಿಧಾನ ಬಹಳ ಸುಲಭ
1 ಲೋಟ ನೀರು ತೆಗೆದುಕೊಂಡು ಅದಕ್ಕೆ ಸಕ್ಕರೆ ಹಾಕಿ ಕರಗಿಸಿಕೊಳ್ಳಬೇಕು. ನಂತರ ಏಲಕ್ಕಿಪುಡಿಯನ್ನು ಹಾಕಿದರೆ ನಿಂಬೆ ಪಾನಕ ತಯಾರಾಗುತ್ತದೆ. ಬೇಕಿದ್ದರೆ ಇದಕ್ಕೆ ಸ್ವಲ್ಪ ಶುಂಠಿಯನ್ನು ಸೇರಿಸಬಹುದು. ನಂತರ ಫ್ರಿಡ್ಜ್ ನಲ್ಲಿಟ್ಟು ಕುಡಿದರೆ ಹೊಟ್ಟೆ ತಣ್ಣಗಿರುತ್ತದೆ. ಜೊತೆಗೆ ದಾಹವೂ ಶಮನವಾಗುತ್ತದೆ.
ನಿಂಬೆ ಹಣ್ಣಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ
-ಮಂಜುಳ.ವಿ.ಎನ್