ಹೆಚ್ಚಿನ ತರಂಗಾಂತರವಿರುವ ಸಿಗ್ನಲ್‌ಗಳನ್ನು ಸ್ವೀಕರಿಸಿಲು ಮತ್ತು ಹೊರಸೂಸಲು ಸಾಧ್ಯವಿರುವಂತಹ ಮೊಬೈಲ್ ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅವು ಹೊರಹಾಕುವ ವಿಕಿರಣಗಳು ನಮ್ಮ ದೇಹಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇವುಗಳು ಹೊರಸೂಸುವ ವಿಕಿರಣಗಳಿಂದ ದೇಹದ ವಿವಿಧ ಕೋಶಗಳು ಹ ಹಾನಿಗೊಳಗಾಗುತ್ತವೆ ಎಂದು ಅಧ್ಯಯನದಿಂದ ಸಾಬೀತಾಗಿದೆ. ಹೀಗಿರುವಾಗ ನಾವು ಬಳಸುವ ಫೋನ್ ಯಾವ ಪ್ರಮಾಣದಲ್ಲಿ ವಿಕಿರಣ ಸೂಸುತ್ತದೆ ಎಂಬುದು ನಾವು ಅರಿತಿರ ಬೇಕು.