ಮಹಿಳೆಯರನ್ನು ಆಕರ್ಷಿಸಲು ಪುರುಷರಿಗಾಗಿಯೇ ಹೊಸ ಸ್ಪ್ರೇ!

ಮಹಿಳೆಯರನ್ನು ಆಕರ್ಷಿಸುವುದು ಹೇಗೆ? ಹೀಗೊಂದು ಪ್ರಶ್ನೆ ಪುರುಷರಲ್ಲಿದ್ದರೆ ಅದಕ್ಕೂ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಲಂಡನ್: ಮಹಿಳೆಯರನ್ನು ಆಕರ್ಷಿಸುವುದು ಹೇಗೆ? ಹೀಗೊಂದು ಪ್ರಶ್ನೆ ಪುರುಷರಲ್ಲಿದ್ದರೆ ಅದಕ್ಕೂ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ.
ಜರ್ಮನಿಯ ಯುನಿವರ್ಸಿಟಿ ಆಫ್ ಬೋನ್ ನ ತಜ್ಞರು ಸ್ಪ್ರೇವೊಂದನ್ನು ತಯಾರಿಸಿದ್ದು, ಇದು ಮಹಿಳೆಯರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. 
ಲವ್ ಹಾರ್ಮೋನ್ ಆಕ್ಸಿಟೋಸಿನ್ ಹೊಂದಿರುವ ಈ ನಾಸಲ್ ಸ್ಪ್ರೇ (Nasal Spray) ಮಹಿಳೆಯರು ಉಚ್ವಾಸ ಮಾಡಿದರೆ, ಅಂಥವರು ತಮ್ಮ ಸಂಗಾತಿಯತ್ತ ಆಕರ್ಷಿತರಾಗುತ್ತಾರಂತೆ. ಈ ಸ್ಪ್ರೇಯಿಂದಾಗಿ ಮಹಿಳೆಯರಿಗೆ ತಮ್ಮ ಸಂಗಾತಿ ಶೇ. 15 ದಷ್ಟು ಸುಂದರವಾಗಿ, ಆಕರ್ಷಕವಾಗಿ ಕಾಣುತ್ತಾರಂತೆ.
ಇಬ್ಬರು ವ್ಯಕ್ತಿಗಳಲ್ಲಿ ಪ್ರೀತಿ ಮೂಡಿದಾಗ ಸ್ರವಿಸಲ್ಪಡುವ ಆಕ್ಸಿಟೋಸಿನ್ ಅಂಶವಿರುವ ಸಿಂಟಾಸಿನನ್ ಈ ಸ್ಪ್ರೇಯಲ್ಲಿದೆ. ಆದ್ದರಿಂದಲೇ ಸಂಗಾತಿಗಳಲ್ಲಿ ಪರಸ್ಪರ ಆಕರ್ಷಣೆ ಮತ್ತು ಒಲವು ಮೂಡಲು ಇದು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com