ಗರ್ಭಾವಸ್ಥೆಯಲ್ಲಿ ಪರೋಕ್ಷ ಧೂಮಪಾನದಿಂದ ಮಗುವಿನ ಮೇಲೆ ಗಂಭೀರ ಪರಿಣಾಮ!

ಏಷ್ಯಾ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗರ್ಭಾವಸ್ಥೆಯಲ್ಲಿ ಪರೋಕ್ಷ ಧೂಮಪಾನ ಮತ್ತು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಾಷಿಂಗ್ಟನ್: ಏಷ್ಯಾ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಹಿಳೆಯರು ಗರ್ಭಾವಸ್ಥೆಯಲ್ಲಿ ಪರೋಕ್ಷ ಧೂಮಪಾನ ಮತ್ತು ಹೊಗೆ ಸೇವಿಸುವುದರಿಂದ ಭ್ರೂಣದಲ್ಲಿಯೇ ಶಿಶು ಸಾಯುವ ಪ್ರಮಾಣ ಹೆಚ್ಚಾಗುತ್ತದೆ. ಅಲ್ಲದೆ ಇನ್ನಿತರ ದುಷ್ಪರಿಣಾಮ ಕೂಡ ಉಂಟಾಗುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ತಾಯಿ ಪರೋಕ್ಷವಾಗಿ ಧೂಮಪಾನ ಮಾಡುವುದರಿಂದ ಮಗುವಿಗೆ ಹುಟ್ಟಿನಿಂದಲೇ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ. ಮಗುವಿನ ದೇಹ ತೂಕದಲ್ಲಿ ಕಡಿಮೆ ಮತ್ತು ಉಸಿರಾಟದ ತೊಂದರೆ ಕೂಡ ಕಾಣಿಸಿಕೊಳ್ಳಬಹುದು.

ಇತ್ತೀಚೆಗೆ ಸಂಶೋಧಕರು ನಡೆಸಿದ ಅಧ್ಯಯನ ಪ್ರಕಾರ ಪಾಕಿಸ್ತಾನದಲ್ಲಿ ಶೇಕಡಾ 40ರಷ್ಟು ಗರ್ಭಿಣಿಯರು ಧೂಮಪಾನ ಸೇವನೆ ಮಾಡುವುದರಿಂದ ವರ್ಷಕ್ಕೆ ಸುಮಾರು 17 ಸಾವಿರ ಶಿಶುಗಳು ಗರ್ಭದಲ್ಲಿಯೇ ಮೃತಪಡುತ್ತವಂತೆ.

ಯಾರ್ಕ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಅಧ್ಯಯನವನ್ನು 30 ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ 2008ರಿಂದ 2013ರವರೆಗೆ ಮಾಡಿದೆ. ಅಮೆರಿಕಾ, ಇಂಡೋನೇಷಿಯಾ, ಜೋರ್ದನ್, ಬಾಂಗ್ಲಾದೇಶ, ನೇಪಾಳ ದೇಶಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಗರ್ಭಿಣಿಯರು ಪರೋಕ್ಷ ಧೂಮಪಾನಕ್ಕೆ ಒಳಗಾಗುತ್ತಾರೆ. ಇಂಡೋನೇಷಿಯಾದಲ್ಲಿ ತಾಯಿಯ ಗರ್ಭದಲ್ಲಿಯೇ ಸಾಯುವ ಶಿಶುಗಳ ಸಂಖ್ಯೆ ಪ್ರತಿವರ್ಷ ಸರಾಸರಿ 10 ಸಾವಿರ ಆಗಿರುತ್ತದೆ.
 
ಪಾಕಿಸ್ತಾನದಲ್ಲಿ ಗರ್ಭಿಣಿಯರ ನೇರ ಧೂಮಪಾನದಿಂದ ಶೇಕಡಾ 1ರಷ್ಟು ತಾಯಿಯ ಗರ್ಭದಲ್ಲಿ ಶಿಶು ಮರಣಿಸಿದರೆ ಶೇಕಡಾ 7ರಷ್ಟು ಪರೋಕ್ಷ ಧೂಮಪಾನದಿಂದ ಆಗುತ್ತಿದೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಸಮಸ್ಯೆಯಾಗಿದೆ. ಆದರೆ ದೇಶಗಳ ಸರ್ಕಾರಗಳು ಈ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿಲ್ಲ ಎನ್ನುತ್ತಾರೆ ಮುಖ್ಯ ಸಂಶೋಧಕ ಕಮ್ರನ್ ಸಿದ್ದಿಖಿ.

ಈ ಅಧ್ಯಯನ ಬಿಎಂಜೆ ಟೊಬ್ಯಾಕೊ ಕಂಟ್ರೋಲ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com