ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕೊರೋನಾ: ವೈರಸ್ ನಿಂದ ದೂರ ಇರಲು ಏನು ಮಾಡಬೇಕು?

ವಿಶ್ವದಾದ್ಯಂತ ಭೀಟಿ ಹುಟ್ಟಿಸಿರುವ ಕೊರೋನಾ ವೈರಸ್ ವೊಂದು ಜಾತಿಯ ವೈರಸ್ ಆಗಿದೆ. ಸೂಕ್ಷ್ಮ ದರ್ಶಕದಲ್ಲಿ ಇದು ಕಿರೀಟ ರೀತಿ ಕಾಣಿಸುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಕೊರೋನಾ ಎಂದರೆ ಕಿರೀಟ ಎಂದರ್ಥ. ಹೀಗಾಗಿ ವೈರಸ್'ಗೆ ಕೊರೋನಾ ಎಂದು ಹೆಸರು. ಚೀನಾದ ವುಹಾನ್ ನಗರದಲ್ಲಿನ ಅಕ್ರಮ ವನ್ಯ ಜೀವಿ ಮಾಂಸ ಕೇಂದ್ರದ ಮೂಲಕ ಮಾನವರಿಗೆ ವೈರಸ್ ತಗುಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಶ್ವದಾದ್ಯಂತ ಭೀಟಿ ಹುಟ್ಟಿಸಿರುವ ಕೊರೋನಾ ವೈರಸ್ ವೊಂದು ಜಾತಿಯ ವೈರಸ್ ಆಗಿದೆ. ಸೂಕ್ಷ್ಮ ದರ್ಶಕದಲ್ಲಿ ಇದು ಕಿರೀಟ ರೀತಿ ಕಾಣಿಸುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಕೊರೋನಾ ಎಂದರೆ ಕಿರೀಟ ಎಂದರ್ಥ. ಹೀಗಾಗಿ ವೈರಸ್'ಗೆ ಕೊರೋನಾ ಎಂದು ಹೆಸರು. ಚೀನಾದ ವುಹಾನ್ ನಗರದಲ್ಲಿನ ಅಕ್ರಮ ವನ್ಯ ಜೀವಿ ಮಾಂಸ ಕೇಂದ್ರದ ಮೂಲಕ ಮಾನವರಿಗೆ ವೈರಸ್ ತಗುಲಿದೆ. ವೈರಸ್ ಒಂಟೆ, ಬೆಕ್ಕು, ಬಾವಲಿ ಸೇರಿದಂತೆ ಹಲವಾರು ಪ್ರಾಣಿಗಳಲ್ಲೂ ಪ್ರವೇಶಿಸುತ್ತಿದೆ. ಪ್ರಾಣಿಗಳ ದೇಹ ಸೇರಿದ ಈ ವೈರಸ್ ಅಪರೂಪ ಎಂಬಂತೆ ಮನುಷ್ಯರ ದೇಹವನ್ನೂ ಸೇರುತ್ತಿದೆ.

ಈ ಮಹಾಮಾರಿ ವೈರಸ್ ಚೀನಾದಲ್ಲಿ 3000ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದುಕೊಂಡಿದ್ದು, ಸಾವಿರಾರು ಮಂದಿಗೆ ಸೋಂಕು ತಗುಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದೀಗ ಈ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ಎಲ್ಲೆಡೆ ಭೀತಿ ಶುರುವಾಗಿದೆ. 

ಕೊರೋನಾ ವೈರಸ್ ನಿಂದ ಪಾರಾಗಲು ಏನನ್ನು ಮಾಡಬೇಕು? 

  • ಶುಚಿತ್ವ ಕಾಪಾಡಿಕೊಳ್ಳಿ. ಆಗಾಗ ಸಾಬೂನು, ಆಲ್ಕೋಹಾಲ್ ದ್ರಾವಣದಿಂದ ಕೈತೊಳೆದುಕೊಳ್ಳಿ.
  • ಸೀನುವಾರ ಮತ್ತು ಕೆಮ್ಮುವಾಗ ಕೈ ಅಥವಾ ಮಾಸ್ಕ್ ನಿಂದ ಬಾಯಿ ಮುಚ್ಚಿಕೊಳ್ಳಿ.
  • ಟಿಶ್ಯು ಪೇಪರ್ ಬಳಕೆ ಬಳಿಕ ಅದನ್ನು ಕಸದ ಬುಟ್ಟಿಗೆ ಹಾಕಿ. ಕ್ರಮಬದ್ಧವಾಗಿ ವಿಲೇವಾರಿ ಮಾಡಿ.
  • ಆರೋಗ್ಯದ ಬಗ್ಗೆ ಯಾವುದೇ ಅನುಮಾನಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ. 
  • ಪ್ರಾಣಿಗಳು ಅಥವಾ ಅವುಗಳ ಗೊಬ್ಬರ ಮುಟ್ಟಿದ ಬಳಿಕ ಸೋಪಿನಿಂದ ಕೈ ಶುಚಿಗೊಳಿಸಿ.
  • ಸಾಕಷ್ಟು ನೀರು, ದ್ರವ ಪದಾರ್ಥಗಳು ಹಾಗೂ ಪೌಷ್ಟಿಕ ಆಹಾರಗಳನ್ನು ನಿಯಮಿತವಾಗಿ ಸೇವಿಸಿ. 
  • ಕೊರೋನಾ ಪೀಡಿತ ದೇಶಗಳಿಂದ ಬಂದವರ ಜೊತೆ ಸಂಪರ್ಕ ಸಾಧಿಸಿದ್ದರೆ ವೈದ್ಯರನ್ನು ಕೂಡಲೇ ಭೇಟಿ ಮಾಡಿ. 

ಇದನ್ನು ಮಾಡದಿರಿ...

  • ಜ್ವರ ಕೆಮ್ಮು ಇರುವವರ ಬಳಿ ಇರಬೇಡಿ. ಸಾರ್ವಜನಿಕವಾಗಿ ಉಗುಳಲು ಹೋಗಬೇಡಿ.
  • ಅರೆಬೆಂದ ಮಾಂಸ ಸೇವನೆ ಮಾಡದಿರಿ. 
  • ಕೈಗಳನ್ನು ತೊಳೆಯದೆ ಕಣ್ಣು, ಮೂಗು ಹಾಗೂ ಬಾಯಿಯನ್ನು ಮುಟ್ಟಬೇಡಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com