The New Indian Express
ನವದೆಹಲಿ: ದೇಶದಲ್ಲಿ ಕ್ಯಾನ್ಸರ್ ಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವ ಕಳವಳಕಾರಿ ಮಾಹಿತಿಯನ್ನು ಐಸಿಎಂಆರ್ ಹೊರಗೆಡವಿದೆ. ಈ ಬಗ್ಗೆ ಐಸಿಎಂಆರ್ ಸಂಸ್ಥೆ ವರದಿಯೊಂದನ್ನೂ ನೀಡಿದೆ.
ಇದನ್ನೂ ಓದಿ: ಭೋಪಾಲ್ ಅನಿಲ ದುರಂತ ಸಂತ್ರಸ್ತರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆ: ಮಧ್ಯ ಪ್ರದೇಶ ಸರ್ಕಾರಕ್ಕೆ ಹೈಕೋರ್ಟ್ ಆದೇಶ
2012-2019ರ ಅವಧಿಯಲ್ಲಿ ದೇಶದಲ್ಲಿ ಒಟ್ಟು 13 ಲಕ್ಷ ಕ್ಯಾನ್ಸರ್ ರೋಗಿಗಳು 'ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ' ಕಾರ್ಯಕ್ರಮದಡಿ ತಮ್ಮ ಹೆಸರು ನೊಂದಾಯಿಸಿದ್ದರು. 13 ಲಕ್ಷದಲ್ಲಿ 6.10 ಲಕ್ಷ ರೋಗಿಗಳು 0- 14 ರ ವಯೋಮಾನದವರು ಎನ್ನುವ ಆತಂಕದ ಮಾಹಿತಿ ವರದಿಯಲ್ಲಿದೆ.
ಇದನ್ನೂ ಓದಿ: ಕ್ಯಾನ್ಸರ್ ಗೆ ರಿಯಾಯಿತಿ ದರದಲ್ಲಿ ಔಷಧ ದೊರಕಿಸಲು ಸೊಸೈಟಿ ಸ್ಥಾಪನೆಗೆ ಚಿಂತನೆ: ಬಸವರಾಜ ಬೊಮ್ಮಾಯಿ
ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳಲ್ಲೇ ಕ್ಯಾನ್ಸರ್ ಹೆಚ್ಚಾಗಿ ಕಂಡುಬಂದಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಕ್ಯಾನ್ಸರ್ ಗೆ ತುತ್ತಾಗಿರುವ ಮಕ್ಕಳಲ್ಲಿ ಶೇ.೫೦ ಪ್ರತಿಶತದಷ್ಟು ಪ್ರಕರಣಗಳು ಬ್ಲಡ್ ಕ್ಯಾನ್ಸರ್ ಕುರಿತಾಗಿದೆ. ಕಳೆದ ಒಂದೇ ವರ್ಷದಲ್ಲಿ ಒಟ್ಟು ೧೪ ಲಕ್ಷ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು 2018ಕ್ಕೆ ಹೋಲಿಸಿದಲ್ಲಿ ಶೇ. 16 ಪ್ರತಿಶತ ಹೆಚ್ಚಾಗಿರುವುದು ಕಂಡುಬಂದಿದೆ.