ಬದುಕಿನಲ್ಲಿ ಶೋಧನೆ ಅಗತ್ಯ: ರಾಘವೇಶ್ವರ ಭಾರತಿ ಸ್ವಾಮೀಜಿ
ಮುಂಬಯಿ: ಎಲ್ಲ ರೀತಿಯ ಸಾಧನೆಯ ಹಿನ್ನೆಲೆಯಲ್ಲಿಯೂ ಶೋಧನೆಯ ತಳಹದಿಯಿದೆ. ಪ್ರತಿಯೊಂದು ಆವಿಷ್ಕಾರವೂ ಸತತ ಶೋಧನೆಯ ತುಡಿತದ ಫಲವಾಗಿದ್ದು, ಇತಿಹಾಸದಲ್ಲಿ ಮೊಟ್ಟಮೊದಲನೆಯ ಅತಿ ದೊಡ್ಡ ಮಟ್ಟದ ಶೋಧವೆಂದರೆ ರಾಮಭಕ್ತಾಗ್ರೇಸರ ಆಂಜನೇಯನ ಸೀತಾನ್ವೇಷಣೆ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.
ಮುಂಬೈ ದೊಂಬಿವಲಿಯಲ್ಲಿನ ನೂಪುರ ಸಭಾಂಗಣದಲ್ಲಿ ಫೆ.15ರಂದು ಆರಂಭವಾದ ಐದು ದಿನಗಳ 'ಶ್ರೀರಾಮಕಥಾ' ಕಾರ್ಯಕ್ರಮದ ಪ್ರಾರಂಭದ ದಿನ ಪ್ರವಚನದಲ್ಲಿ ಅವರು ವಾಲ್ಮೀಕಿ ರಾಮಾಯಣದ ಸುಂದರಕಾಂಡದ ಕುರಿತು ಮಾತನಾಡಿದರು.
ಸೀತೆಯನ್ನು ಹುಡುಕುತ್ತ ಸಾಗರತೀರದಲ್ಲಿ ಕುಳಿತು ಸಾಗರೋಲ್ಲಂಘನದ ಬಗ್ಗೆ ನಿರಾಶರಾಗಿದ್ದಾಗ ಆಂಜನೇಯನ ಶಕ್ತಿ-ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಿ ಅವನಲ್ಲಿ ಸುಪ್ತವಾಗಿದ್ದ ಅಗಾಧ ಬಲವನ್ನುಟೂ ತಿಳಿಹೇಳಿ ಎಚ್ಚರಿಸಿದವನು ವೃದ್ಧ ಜಾಂಬವಂತ. ವಾಸ್ತವವಾಗಿ ಗುರುವಾದವನೂ ಇದೇ ರೀತಿಯಲ್ಲಿ ಶಿಷ್ಯನಲ್ಲಿ ಅರಿವಿನ ಬೆಳಕು ಹರಡುತ್ತಾನೆ ಎಂದರು.
ಕಲಾವಿದರಾದ ಶ್ರೀಪಾದ ಭಟ್, ವೆಂಕಟಗಿರಿ ಹಾಗೂ ದೀಪಿಕಾ ಭಟ್ ಗಾಯನ, ಉದಯ ಭಂಡಾರಿ ಕೀಬೋರ್ಡ್, ಮ ಹೇಶ್ ಗಾಡವಿ ತಬಲಾ, ಆಶುಚಿತ್ರಕಾರ ಖ್ಯಾತ ವ್ಯಂಗ್ಯಚಿತ್ರಕಾರ ಗಣಪತಿ ನೀರ್ನಳ್ಳಿ ಚಿತ್ರ ರಚನೆಯಲ್ಲಿ ಸಹಕರಿಸಿದರು.ಪ್ರಸಿದ್ಧ ಯಕ್ಷಗಾನ ಕಲಾವಿದರಾದ ವಿಷ್ಣು ಭಟ್ ಮೂರೂರು ಹಾಗೂ ಈಶ್ವರ ಭಟ್ ಕಟ್ಟೆ ಅವರಿಂದ 'ಜಾಂಬವತ ಪ್ರಚೋದನೆ' ರೂಪಕ ಪ್ರದರ್ಶನವಾಯಿತು.
ದೊಂಬಿವಿಲಿ ವಲಯದ ಗೀತಾ ರಾಮಚಂದ್ರ ಹೆಗಡೆ ದಂಪತಿ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಿದರು.
ಶ್ರೀರಾಮಕಥಾ ನಿರ್ವಹಣಾ ಸಮಿತಿ ಅಧ್ಯಕ್ಷ ಎಂ.ಕೆ.ಜನಾರ್ದನ ಪ್ರಾಸ್ತಾವಿಕ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

