ದಿಲ್ಲಿಯಲ್ಲಿ ಜಗದೀಶ್ ಹಿರೇಮಠರಿಗೆ ಶ್ರದ್ಧಾಂಜಲಿ
ನವದೆಹಲಿ: ದಿಲ್ಲಿಯಲ್ಲಿ ಇತ್ತೀಚೆಗೆ ನಿಧನರಾದ ಭಾರತದ ಮಾಜಿ ರಾಯಭಾರಿ, ಬ್ಯಾಂಕ್ ನಿರ್ದೇಶಕ, ಪ್ರಧಾನಮಂತ್ರಿಯವರ ಮಾಜಿ ವಿಶೇಷ ಸಲಹೆಗಾರ ಜಗದೀಶ್ ರುದ್ರಯ್ಯ ಹಿರೇಮಠ ಅವರಿಗೆ ದಿಲ್ಲಿಯಲ್ಲಿ ಮೇ 15ರಂದು 'ದೆಹಲಿ ಕನ್ನಡಿಗ' ಪತ್ರಿಕೆಯ ಆಶ್ರಯದಲ್ಲಿ ಬುದ್ಧಿಜೀವಿಗಳು, ಸಾಹಿತಿಗಳು, ಕಲಾವಿದರು, ಪ್ರಾಧ್ಯಾಪಕರು ಸಭೆ ಸೇರಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. 'ದೆಹಲಿ ಕನ್ನಡಿಗ' ಪತ್ರಿಕೆಯ ಸಂಪಾದಕ ಬಾ. ಸಾಮಗ ಮಾತನಾಡುತ್ತಾ ವಿಜಾಪುರದಲ್ಲಿ ಜನಿಸಿ ವಿದೇಶದಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದು ಕೇಂದ್ರ ಸರ್ಕಾರದಲ್ಲಿ ಸೇವೆಗೆ ಸೇರಿದ ಹಿರೇಮಠರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಬಲ್ಗೇರಿಯಾ, ಭೂತಾನ್, ಯುಗೋಸ್ಲಾವಿಯಾ, ಆಸ್ಟ್ರಿಯಾ ದೇಶಗಳಿಗೆ ಭಾರತದ ರಾಯಭಾರಿಯಾಗಿ ಭಾರತ ಸಂಸ್ಕೃತಿ ಪಸರಿಸಿದರು. ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕಿನ ನಿರ್ದೇಶಕರಾಗಿಯೂ, ವಿತ್ತ ಮಂತ್ರಾಲಯದ ಜಂಟೀ ಕಾರ್ಯದರ್ಶಿಯಾಗಿಯೂ ಮೆಚ್ಚುಗೆ ಪಡೆದಿದ್ದರು. ಪ್ರಧಾನ ಮಂತ್ರಿಯವರ ವಿಶೇಷ ಸಲಹೆಗಾರರಾಗಿದ್ದ ಹಿರೇಮಠರು ನೆಹರೂ ಫೆಲೋಶಿಪ್ ಪಡೆದು ದಕ್ಷಿಣಾ ಆಫ್ರಿಕಾದಲ್ಲಿ ಭಾರತೀಯರ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಿ 'ಸಮರಿಂಗ್ ಇನ್ ಸೌತ್ ಆಫ್ರಿಕಾ' ಗ್ರಂಥ ಬರೆದಿದ್ದರು. ಅವರು ಬಸವತತ್ವ ಪರಿಪಾಲಕ ರತ್ನ ಪ್ರಶಸ್ತಿ ಪಡೆದ ಗಣ್ಯ ಕನ್ನಡಿಗರಾಗಿ ಹೊರನಾಡಿನಲ್ಲಿ ಗೌರವ ಪಡೆದಿದ್ದರು ಎಂದು ತಿಳಿಸಿದರು.
ಹಿರಿಯ ಅಧಿಕಾರಿ ಡಾ. ನಳಿನಿ ರಾಜಾರಾಮ್ ಮಾತನಾಡಿ ಯುನೈಟೆಡ್ ನ್ಯಾಷನಲ್ ಆರ್ಗನೈಸೇಷನ್‌ನ ಪ್ರತಿನಿಧಿಯಾಗಿದ್ದ ಹಿರೇಮಠರು ಕೀನ್ಯಾ ಮುಂತಾದ ದೇಶಗಳಲ್ಲಿ ವಿಶೇಷ ಅಧಿಕಾರಿಯಾಗಿದ್ದರು. ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯ ಪ್ರತಿನಿಧಿಯಾಗಿದ್ದ ಇವರು ಶಾಂತಿಸೌಹಾರ್ದ ಮಾನವ ಸಮಾಜ ನಿರ್ಮಾಣದ ಪ್ರೇರಕರಾಗಿದ್ದರೆಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

