ಹೊರನಾಡು ಕನ್ನಡಿಗ

ಮುಂಬಯಿ ಕನ್ನಡಿಗರಿಗೆ 'ಕನ್ನಡದ ಕನ್ನಡಿ' ತೋರಬೇಕಾಗಿದೆ: ಮನೋಹರ ನಾಯಕ್

Published On :

ಮುಂಬಯಿ: ಮುಂಬಯಿಯ 'ಕನ್ನಡ' ಕನ್ನಡಿಯೊಳಗಿನ ಗಂಟಾಗಿ ಉಳಿದಿದೆ. ನಮ್ಮ ಕನ್ನಡಕ್ಕೆ 'ಕನ್ನಡಿ' ಹಿಡಿಯಬೇಕಾಗಿದೆ. ಸಾಹಿತ್ಯ ಕೃಷಿಗೆ ಮುಂಬಯಿಯಷ್ಟು ಫಲವತ್ತಾದ ಭೂಮಿ ಬೇರಿಲ್ಲವಂತೆ. ಹಾಗಿದ್ದೂ ಮುಂಬಯಿ ಕನ್ನಡ ಸಾಹಿತ್ಯ ಕೃಷಿಯ ನೇಗಿಲು ಅದೇಕೆ ಮೂಲೆ ಪಾಲಾಗುತ್ತಿದೆ? ಇಂಗ್ಲೀಷ್ನ ಅಡಕೊತ್ತಿನಲ್ಲಿ ಸಿಕ್ಕ ಕನ್ನಡದ ಅಡಿಕೆಯನ್ನು ಉಳಿಸಿಕೊಳ್ಳಬೇಕು. ಕರ್ನಾಟಕ ಸಂಘವೆಂಬ ಈ ಕನ್ನಡ ಕಾಶಿಗೆ ಬಂದು ಸಾರ್ಥಕರಾಗಬೇಕಾದ ಹೊಸ ಪೀಳಿಗೆಯ ಕುಲಪುತ್ರರು ಬೇಕಾಗಿದ್ದಾರೆ.
ಅನಿತಾ ಪೂಜಾರಿಯಂತಹ ಹೊಸ ಪೀಳಿಗೆಯ ಸಾಹಿತ್ಯಕ ಶಿಷ್ಯೆಯರು ಇನ್ನಷ್ಟು ಜನ್ಮವೀಯಲಿ ಎಂದು ಕವಿ, ಲಿಂಗೋ ಇಂಡಿಯಾ ಪ್ರೈ. ಲಿ. ಶಂಖ ಸೌಂಡ್ ಸ್ಟುಡಿಯೋಸ್ನ ಆಡಳಿತ ನಿರ್ದೇಶಕ ಮನೋಹರ ನಾಯಕ್ ಹೇಳಿದರು.
ಮಾ.16 ಸಂಜೆ ಸಮರಸ ಭವನದಲ್ಲಿ ಕರ್ನಾಟಕ ಸಂಘ, ಮುಂಬಯಿ ಇದರ ಆಶ್ರಯದಲ್ಲಿ ಅಭಿಜಿತ್ ಪ್ರಕಾಶನ, ಮುಂಬಯಿ ಪ್ರಕಟಿಸಿದ ಯುವ ಕವಯತ್ರಿ ಅನಿತಾ ಪಿ. ಪೂಜಾರಿ ತಾಕೋಡೆ ಇವರ ಚೊಚ್ಚಲ ಕವನ ಸಂಕಲನ 'ಕಾಯುತ್ತಾ ಕವಿತೆ' ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
'ಕಾಯುತ್ತಾ ಕವಿತೆ' ಕೃತಿ ಬಿಡುಗಡೆ ಮಾಡಿದ ಕರ್ನಾಟಕ ಸಂಘ, ಮುಂಬಯಿ ಇದರ ಗೌ. ಕಾರ್ಯದರ್ಶಿ ಭರತ್ಕುಮಾರ್ ಪೊಲಿಪು ಮಾತನಾಡಿ ಸಾಹಿತ್ಯಕ್ಕೆ ಸಂಬಂಧಗಳನ್ನು ಕಟ್ಟುವ ಶಕ್ತಿ ಇದೆ ಎಂದರು.
ಗೌರವ ಅತಿಥಿ 'ಗುರುತು' ಪತ್ರಿಕೆಯ ಸಂಪಾದಕ ಬಾಬು ಶಿವ ಪೂಜಾರಿ ಹಾಗೂ ಕೃತಿಯನ್ನು ಪರಿಚಯಿಸಿದ ಸಾಹಿತಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಮಾತನಾಡಿದರು. ವೇದಿಕೆಯ ಗಣ್ಯರನ್ನು ಸಂಘದ ಉಪಾಧ್ಯಕ್ಷ ಬಿ.. ನಾಯಕ್ ಮತ್ತಿತರು ಗೌರವಿಸಿದರು. ಮಾಲತಿ ಚಂದ್ರಕಾಂತ್ ನಿರೂಪಿಸಿದರು. ಓಂದಾಸ್ ಕಣ್ಣಂಗಾರ್ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.