ಹೊರನಾಡು ಕನ್ನಡಿಗ

ತುಂಗಪ್ಪ ಬಂಗೇರಗೆ ಅಡ್ಯಾರು ನಡಿಗುತ್ತು ತಿಮ್ಮಪ್ಪ ಶೆಟ್ಟಿ ಸ್ಮಾರಕ ಪ್ರಶಸ್ತಿ

Published On :

ಬಂಟ್ವಾಳ: ಮುಂಬೈನ ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಿಲಿ ಸಂಸ್ಥೆಯ 14ನೇ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಅಡ್ಯಾರು ನಡಿಗುತ್ತು ತಿಮ್ಮಪ್ಪ ಶೆಟ್ಟಿ ಸ್ಮರಣಾರ್ಥ ನೀಡುವ ಪ್ರಶಸ್ತಿಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತುಂಗಪ್ಪ ಬಂಗೇರಗೆ ಪ್ರದಾನ ಮಾಡಲಾಯಿತು.
ಬಾಂಬೇ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ನ್ಯಾ. ರತ್ನಾಕರ ವಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಂಧೇರಿ ಪೂರ್ವದ ಸಂಜೀವಿನಿ ಆಸ್ಪತ್ರೆ ಆಡಳಿತ ನಿರ್ದೇಶಕ ಹಾಗೂ ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟಂಟ್ಸ್ ಮಾಜಿ ಕಾರ್ಯಾಧ್ಯಕ್ಷ ಡಾ. ಸುರೇಶ್ ಎಸ್.ರಾವ್ ಕಟೀಲು ಕಾರ್ಯಕ್ರಮ ಉದ್ಘಾಟಿಸಿದರು.
ಬಳಗದ ಗೌರವಾಧ್ಯಕ್ಷ, ಬೋರಿವಿಲಿ ಪಶ್ಚಿಮ ಕ್ಷೇತ್ರದ ಶಾಸಕ ಗೋಪಾಲ್ ಸಿ. ಶೆಟ್ಟಿ, ಮಹಾರಾಷ್ಟ್ರದ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಚಾರ್ಕೋಪ್ ಕನ್ನಡಿಗರ ಬಳಗ ಸಂಸ್ಥಾಪಕ ಜಯ ಸಿ.ಶೆಟ್ಟಿ, ಅಧ್ಯಕ್ಷ ಭಾಸ್ಕರ ಬಿ.ಸರಪಾಡಿ, ಗೌರವ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಾವ್, ಬಳಗದ ಸಲಹೆಗಾರ ಡಾ.ಎನ್.ಜಿ. ಭಟ್, ಉಪಾಧ್ಯಕ್ಷ ಮಂಜುನಾಥ ಬನ್ನೂರು, ಸಹ ಕೋಶಾಧಿಕಾರಿ ಸದಾಶಿವ ಸಿ.ಪೂಜಾರಿ, ಸಮಿತಿ ಕೋಶಾಧಿಕಾರಿ ಲತಾ ಬಂಗೇರ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶಾಂತಾ ಎನ್.ಭಟ್, ವೀಣಾ ಸರಪಾಡಿ, ಪದ್ಮಾವತಿ ಬಿ.ಶೆಟ್ಟಿ, ಎಸ್.ಸಿ. ಪೂಜಾರಿ, ಕೃಷ್ಣ ಅಮೂನ್, ನೀನಾ ಪಿ.ಶೆಟ್ಟಿ, ಜಯಶ್ರೀ ಸುವರ್ಣ, ಹರೀಶ್ ಚೇವಾರ್, ಜೊತೆ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ, ಗೌರಿ ಪಣಿಯಾಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.