ಹೊರನಾಡು ಕನ್ನಡಿಗ

ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮ ಶತಮಾನೋತ್ಸವ 8ರಂದು

Published On :

ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು, ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮ ಶತಮಾನೋತ್ಸವ ಪೌರ ಸಮಿತಿ ಬದಿಯಡ್ಕ ವತಿಯಿಂದ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮ ಶತಮಾನೋತ್ಸವ ಕಾಸರಗೋಡು ತಾಲೂಕು ಬದಿಯಡ್ಕ ಪೆರಡಾಲದ ಕವಿತಾ ಕುಟೀರದಲ್ಲಿ 8ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕದನವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಉದ್ಘಾಟಿಸಲಿದ್ದಾರೆ.
ಮಾಜಿ ಶಾಸಕರಾದ ವಾಟಾಳ್ ನಾಗರಾಜ್, ಚಂದ್ರಕಾಂತ ಗುರಪ್ಪ ಬೆಲ್ಲದ ಧಾರವಾಡ, ಸಚಿವರಾದ ಕೆ.ಸಿ. ಜೋಸೆಫ್, ಯು.ಟಿ. ಖಾದರ್, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎ. ವಿವೇಕ ರೈ, ಡಾ.ಎಂ.ಎಂ. ಕಲಬುರ್ಗಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಲೋಕಸಭಾ ಸದಸ್ಯ ಪಿ. ಕರುಣಾಕರನ್, ಅಡ್ವಕೇಟ್ ಪಿ.ಪಿ. ಶ್ಯಾಮಲದೇವಿ, ಶಾಸಕ ಪಿ.ಬಿ. ಅಬ್ದುಲ್ ರಜಾಕ್, ಪ್ರೊ. ಜಾನಕಿ ಬ್ರಹ್ಮಾವರ, ಬಿ. ಸುಬ್ಬಯ್ಯ ರೈ, ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಸಿ.ಟಿ. ಅಹಮ್ಮದಾಲಿ, ಚೆರ್ಕಳಂ ಅಬ್ದುಲ್ಲಾ  ಭಾಗವಹಿಸಲಿದ್ದಾರೆ.
ಪೌರ ಸನ್ಮಾನ: ಈ ಸಂದರ್ಭ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈಗೆ ಪೌರ ಸನ್ಮಾನ, ಗೌರವಾರ್ಪಣೆ, 'ಶತಮಾನೋತ್ಸವದ ಕಯ್ಯಾರ' ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಸನ್ನಿಧಿ ಟಿ. ರೈ ಪೆರ್ಲ ಹಾಡಿದ ಕಯ್ಯಾರರ 'ಎನ್ನಪ್ಪೆತುಳುವಪ್ಪೆ' ಕೃತಿಯಿಂದ ಆಯ್ದ ತುಳು ಕವನಗಳ 'ಎಸಳ್‌' ಸಿ.ಡಿ. ಬಿಡುಗಡೆ, ಮಣಿಪಾಲ ದೇವಕಿ ಭುವನ ಪ್ರಸಾದ್ ಹೆಗ್ಡೆ ಸಂಗ್ರಹದ 'ಕಯ್ಯಾರರು- ಭಾವ ಚಿತ್ರಗಳಲ್ಲಿ- ಪತ್ರಿಕೆಗಳಲ್ಲಿ- ಬರಹಗಳಲ್ಲಿ' ಪ್ರದರ್ಶನ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.