

ಬೆಂಗಳೂರು; ಟ್ರಾವೆಲ್ ಏಜೆನ್ಸೀಸ್ ಮತ್ತು ರಸ್ತೆ ಬದಿ ವ್ಯಾಪಾರಿಗಳಿಂದ ಲಂಚ ಪಡೆಯುತ್ತಿದ್ದ ಸಂಚಾರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಒಬ್ಬ ಸಿಕ್ಕಿ ಬಿದ್ದು ಅಮಾನತಾಗಿರುವ ಘಟನೆ ಬೆಂಗಳೂರಿನ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನರಸಿಂಹ ಮೂರ್ತಿ ಅಮಾನತಾಗಿರುವ ಪೊಲಿಸ್ ಇನ್ಸ್ ಪೆಕ್ಟರ್, ಈತ ಟ್ರಾವೆಲ್ ಏಜೆನ್ಸಿಗಳಿಗೆ ಫೇವರ್ ಮಾಡುವ ಸಲುವಾಗಿ ಅವರಿಂದ ಲಂಚ ಸ್ವೀಕರಿಸುತ್ತಿದ್ದ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದರ ಆಧಾರದ ಮೇರೆಗೆ ಪಶ್ಟಿಮ ವಿಭಾಗ ಸಂಚಾರಿ ಡಿಸಿಪಿ ಅಮಾನತು ಆದೇಶ ಹೊರಡಿಸಿದ್ದಾರೆ.
ಟ್ರಾವೆಲ್ ಎಜೆನ್ಸಿ ವಾಹನಗಳು ಸಂಚಾರಿ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಪ್ರೊ. ಜನಾರ್ಧನ್ ಎಂಬುವರು ವಿಡಿಯೋ ಮಾಡಿದ್ದರು. ಇದರ ಆಧಾರದ ಮೇಲೆ ಟ್ರಾವೆಲ್ ಎಜೆನ್ಸಿ ವಿರುದ್ಧ ದೂರು ದಾಖಲಿಸಲು ನರಸಿಂಹ ಮೂರ್ತಿ ಅವರ ಬಳಿ ಜನಾರ್ಧನ್ ಹೋಗಿದ್ದರು. ಆದರೆ ಇನ್ಸ್ ಪೆಕ್ಟರ್ ನರಸಿಂಹ ಮೂರ್ತಿ ದೂರು ದಾಖಲಿಸಿಕೊಂಡಿರಲಿಲ್ಲ.
ಟ್ರಾವೆಲ್ ಎಜೆನ್ಸಿ ಅವರಿಂದ ಲಂಚ ಪಡೆಯುತ್ತಿದ್ದ ನರಸಿಂಹ ಮೂರ್ತಿ ಅವರು ವಾಹನ ನಿಲ್ಲಿಸಲು ಲಂಚ ಸ್ವೀಕರಿಸುತ್ತಿದ್ದ ಜನಾರ್ದನ ಅವರ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದ. ಈ ಸಂಬಂಧ ಜನಾರ್ಧನ್ ಎಸಿಪಿ ಅವರಿಗೆ ದೂರು ನೀಡಿದ್ದರು.