ದುಪ್ಪಟ್ಟು ಹಣ ನೀಡಲ್ಲ ಎಂದಿದ್ದಕ್ಕೆ ಮಹಿಳೆಯನ್ನು ನಿಂದಿಸಿದ ಆಟೋ ಚಾಲಕ: ಬಂಧನ

ನಿಗದಿಪಡಿಸಿದ್ದಕ್ಕಿಂತ ದುಪ್ಪಟ್ಟು ಹಣ ನೀಡುವಂತೆ ಹೇಳಿ, ಇದಕ್ಕೆ ಒಪ್ಪದ ಮಹಿಳೆಯನ್ನು ಆಟೋ ಚಾಲಕನೊಬ್ಬ ಬಾಯಿಗೆ ಬಂದಂತೆ ನಿಂದಿಸಿರುವ ಘಟನೆಯೊಂದು ನಗರದ ಕಬ್ಬನ್ ಪಾರ್ಕ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿಗದಿಪಡಿಸಿದ್ದಕ್ಕಿಂತ ದುಪ್ಪಟ್ಟು ಹಣ ನೀಡುವಂತೆ ಹೇಳಿ, ಇದಕ್ಕೆ ಒಪ್ಪದ ಮಹಿಳೆಯನ್ನು ಆಟೋ ಚಾಲಕನೊಬ್ಬ ಬಾಯಿಗೆ ಬಂದಂತೆ ನಿಂದಿಸಿರುವ ಘಟನೆಯೊಂದು ನಗರದ ಕಬ್ಬನ್ ಪಾರ್ಕ್ ನಲ್ಲಿ ಗುರುವಾರ ನಡೆದಿದೆ.

ಕಬ್ಬನ್ ಪಾರ್ಕ್ ನಲ್ಲಿ ಇಂದು ಬೆಳಿಗ್ಗೆ 11.30ರ ಸುಮಾರಿಗೆ ಘಟನೆ ನಡೆದಿದೆ. ಮಹಿಳಾ ಪ್ರಯಾಣಿಕರಿಬ್ಬರು ಕಂಠೀರವ ಸ್ಟೇಡಿಯಂ ಬಳಿಗೆ ಹೋಗುವ ಸಲುವಾಗಿ ಆಟೋವನ್ನು ಕೇಳಿದ್ದಾರೆ. ಈ ವೇಳೆ ಆಟೋ ಚಾಲಕನೊಬ್ಬ ನಿಗದಿಪಡಿಸಿದ್ದಕ್ಕಿಂತ ದುಪ್ಪಟ್ಟು ಹಣವನ್ನು ನೀಡುವಂತೆ ಕೇಳಿದ್ದಾನೆ.

ಈ ವೇಳೆ ಮಹಿಳೆಯರು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಮುಂದಕ್ಕೆ ಸಾಗಿದ್ದಾರೆ. ತದನಂತರ ರು.20 ಹೆಚ್ಚಾಗಿ ನೀಡುತ್ತೇವೆಂದು ಮತ್ತೆ ಬಂದಿದ್ದಾರೆ. ಈ ವೇಳೆ ಕೋಪಗೊಂಡಿರುವ ಚಾಲಕ ಹೊರಗಿನ ಮಹಿಳೆಯರು ಹಾಗೆ ಹೀಗೆ ಎಂದು ಬಾಯಿಗೆ ಬಂದಂತೆ ನಿಂದಿಸಿದ್ದಾನೆಂದು ತಿಳಿದುಬಂದಿದೆ.

ಬಳಿಕ ಚಾಲಕನ ಈ ದುರ್ವತನೆಯನ್ನು ಕಂಡ ಮಹಿಳೆಯರು 100ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿರುವ ಪೊಲೀಸರು ಚಾಲಕನನ್ನು ಬಂಧನಕ್ಕೊಳಪಡಿಸಿದ್ದು, ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 504/505ರ (ಅಂತರಾಷ್ಟ್ರೀಯ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com