ಬಾಲಕಿಗೆ ಬೆಲ್ಟ್ ನಿಂದ ಥಳಿಸಿರುವ ಶಿಕ್ಷಕಿ
ಬಾಲಕಿಗೆ ಬೆಲ್ಟ್ ನಿಂದ ಥಳಿಸಿರುವ ಶಿಕ್ಷಕಿ

ನೆಲಮಂಗಲ: ಹೋಂ ವರ್ಕ್ ಮಾಡದ್ದಕ್ಕೆ 9 ವರ್ಷದ ಬಾಲಕಿಗೆ ಬೆಲ್ಟ್ ನಿಂದ ಥಳಿಸಿದ ಶಿಕ್ಷಕಿ

ಹೋಂವರ್ಕ್ ಮಾಡದ ಕಾರಣ 9 ವರ್ಷದ ಬಾಲಕಿಗೆ ಶಿಕ್ಷಕಿಯೊಬ್ಬರು ಲೆದರ್ ಬೆಲ್ಟ್ ನಿಂದ ಬಾಸುಂಡೆ ಬರುವ ಹಾಗೆ ಥಳಿಸಿರುವ ಘಟನೆ ಬೆಂಗಳೂರಿನ ..

ಬೆಂಗಳೂರು:  ಹೋಂವರ್ಕ್ ಮಾಡದ ಕಾರಣ 9 ವರ್ಷದ ಬಾಲಕಿಗೆ ಶಿಕ್ಷಕಿಯೊಬ್ಬರು ಲೆದರ್ ಬೆಲ್ಟ್ ನಿಂದ ಬಾಸುಂಡೆ ಬರುವ ಹಾಗೆ ಥಳಿಸಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.

ವೆಂಕಟೇಶ್ ಹಾಗೂ ಆಶಾ ಎಂಬುವವರು ನೆಲಮಂಗಲ ಪಟ್ಟಣದ ಬಿನ್ನಮಂಗಲದಲ್ಲಿ ವಾಸವಾಗಿದ್ದು, 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ಮಗಳನ್ನು ಮನೆ ಟ್ಯೂಷನ್‌ಗೆ ಹಾಕಿದ್ದರು. ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸದ ಹಿನ್ನೆಲೆಯಲ್ಲಿ  ಶಿಕ್ಷಕಿ ಲತಾ  ಬೆಲ್ಟ್‌‌ನಿಂದ ಬೆನ್ನಿಗೆ ಹಾಗೂ ಕಿವಿಯ ಹಿಂಭಾಗ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ.

ಈ ಶಿಕ್ಷಕಿ ಮನೆ ಪಾಠ ಮಾಡುವುದಕ್ಕಾಗಿ ಒಂದು ವರ್ಷಕ್ಕೆ ಹತ್ತು ಸಾವಿರ ರೂ.ನಂತೆ ಹಣ ಪಡೆದು ಮಕ್ಕಳಿಗೆ ಪಾಠ ಹೇಳಿ ಕೊಡುತ್ತಾರೆ. ಆದರೆ ಥಳಿತಕ್ಕೊಳಗಾದ ವಿದ್ಯಾರ್ಥಿನಿ ಸರಿಯಾಗಿ ಹೋಂ ವರ್ಕ್ ಮಾಡದಿದ್ದಕ್ಕೆ ಹಲ್ಲೆ ನಡೆಸಿರುವುದಾಗಿ ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದಾರೆ.

ಟ್ಯೂಷನ್‌ನಿಂದ ಮಗುವನ್ನು ಮನೆಗೆ ಕರೆದುಕೊಂಡು ಹೋದ ಬಳಿಕ ನೋವನ್ನು ತಾಳಲಾರದ ಮಗು ಗಾಯಗಳನ್ನು ಪೋಷಕರಿಗೆ ತೋರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಮಗುವಿನ ಪೋಷಕರು ತಡರಾತ್ರಿಯೇ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

 ಹಿಂದೆಯೂ ಹಲವು ವಿದ್ಯಾರ್ಥಿಗಳಿಗೆ ಶಿಕ್ಷಕಿ ಹೀಗೆಯೇ ಹಲ್ಲೆ ನಡೆಸಿದ್ದಾರೆ. ಆದರೆ ಯಾವೊಬ್ಬ ವಿದ್ಯಾರ್ಥಿಯೂ ಈ ವಿಷಯವನ್ನು ಬಹಿರಂಗ ಪಡಿಸಿರಲಿಲ್ಲ.

Related Stories

No stories found.

Advertisement

X
Kannada Prabha
www.kannadaprabha.com