ಸಾಲ ಕೊಡಬೇಕಿದ್ದ ವ್ಯಕ್ತಿಯ ಪತ್ನಿ ಮಕ್ಕಳಿಗೆ ಗೃಹ ಬಂಧನ, ಪೊಲೀಸರಿಂದ ರಕ್ಷಣೆ

ಸಾಲ ವಾಪಸ್ ನೀಡದೆ ಇದ್ದ ವ್ಯಕ್ತಿಯ ಇಬ್ಬರು ಮಕ್ಕಳು ಹಾಗೂ ಆತನ ಪತ್ನಿಯನ್ನು ಮನೆಯಲ್ಲಿ ಬಂಧಿಸಿಟ್ಟಿದ್ದ ಘಟನೆ ಕೋಲಾರದಲ್ಲಿ ನಡೆದಿದೆ.
ಸಾಲ ಕೊಡಬೇಕಿದ್ದ ವ್ಯಕ್ತಿಯ ಪತ್ನಿ ಮಕ್ಕಳಿಗೆ ಗೃಹ ಬಂಧನ, ಪೊಲೀಸರಿಂದ ರಕ್ಷಣೆ
ಸಾಲ ಕೊಡಬೇಕಿದ್ದ ವ್ಯಕ್ತಿಯ ಪತ್ನಿ ಮಕ್ಕಳಿಗೆ ಗೃಹ ಬಂಧನ, ಪೊಲೀಸರಿಂದ ರಕ್ಷಣೆ
Updated on: 

ಕೋಲಾರ: ಸಾಲ ವಾಪಸ್ ನೀಡದೆ ಇದ್ದ ವ್ಯಕ್ತಿಯ ಇಬ್ಬರು ಮಕ್ಕಳು ಹಾಗೂ ಆತನ ಪತ್ನಿಯನ್ನು ಮನೆಯಲ್ಲಿ ಬಂಧಿಸಿಟ್ಟಿದ್ದ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರದ ರೆಹಮತ್ ನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಗೃಹ ಬಂಧನದಲ್ಲಿದ್ದ ಓರ್ವ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ಸಯೀದ್ ಅನ್ಸರ್(42) ಆತನ ಪತ್ನಿ ವಹೀದಾ ಬೇಗಂ ಹಾಗೂ ಇಬ್ಬರು ಮಕ್ಕಳು ಇಶ್ರಾತ್ ಎಂಬುವವರ ಮನೆಯಲ್ಲಿ ಬಾಡಿಗೆಗಿದ್ದರು. ಚಿಟ್ ಫಂಡ್ ಮೂಲಕ ಇಶ್ರಾತ್ ಗೆ ಸಯೀದ್ ಅನ್ಸರ್ 2 ಲಕ್ಷ ರೂಪಾಯಿ ನೀಡಬೇಕಿತ್ತು. ಇದಕ್ಕಾಗಿ ಇಶ್ರಾತ್ ಅವರ ಒತ್ತಡವನ್ನು ತಡೆಯಲಾಗದೆ ಸಯೀದ್ ಅನ್ಸರ್ ಕಳೆದ ತಿಂಗಳು ಮನೆಯನ್ನು ಖಾಲಿ ಮಾಡಿದ್ದರು.

ಇದರಿಂದ ಆಕ್ರೋಶಗೊಂಡ ಮನೆಯ ಮಾಲೀಕರಾಗಿದ್ದ ಇಶ್ರಾತ್ ಆಕೆಯ ಮಗ ತಬ್ರೇಜ್ ನೊಂದಿಗೆ ಸೇರಿ ಸಯೀದ್ ಅನ್ಸರ್ ನ ಪತ್ನಿ ವಹೀದಾ ಬೇಗಂ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಗೃಹ ಬಂಧನದಲ್ಲಿರಿಸಿದ್ದರು ಎಂದು ಕೋಲಾರ ಟೌನ್ ನ ಸರ್ಕಲ್ ಇನ್ಸ್ ಪೆಕ್ಟರ್ ಲೋಕೇಶ್ ತಿಳಿಸಿದ್ದಾರೆ. ವಹೀದಾ ಬೇಗಂ ಅವರ ತಾಯಿಯ ದೂರನ್ನು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದು, ಗೃಹ ಬಂಧನಕ್ಕೊಳಗಾಗಿದ್ದವರನ್ನು ರಕ್ಷಿಸಿ, ಇಶ್ರಾತ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com