ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಪತಿಯ ಕೊಂದ ಪತ್ನಿ, ಇಬ್ಬರ ಬಂಧನ

ಪ್ರಿಯಕರನ ಜತೆಗೊಡಿ ಪತಿಯನ್ನು ಹತೈಗೈದ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಸುಬ್ರಮಣ್ಯಪುರ ಪೋಲೀಸರು ಬಂಧಿಸಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಪ್ರಿಯಕರನ ಜತೆಗೊಡಿ ಪತಿಯನ್ನು ಹತೈಗೈದ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಸುಬ್ರಮಣ್ಯಪುರ ಪೋಲೀಸರು ಬಂಧಿಸಿದ್ದಾರೆ.

ಸುಬ್ರಹ್ಮಣ್ಯಪುರ ಸಮೀಪದ ಎಜೆಎಸ್‌ ಬಡಾವಣೆಯಲ್ಲಿ ನಡೆದಿದ್ದ ವಿಜೆಯೇಂದ್ರ ನಾಯಕ್‌ (29) ಎಂಬುವರ ಕೊಲೆ ಪ್ರಕರಣ ಸಂಬಂಧ, ಪೊಲೀಸರು ಮೃತರ ಪತ್ನಿ ಮಂಜುಳಾ (22) ಹಾಗೂ ಆಕೆಯ ಪ್ರಿಯತಮ ಅಂಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮದುವೆಗೂ ಮುನ್ನ ಮಂಜುಳಾ, ಪುಟ್ಟಪರ್ತಿಯಲ್ಲಿ ಕಾರ್ಮಿಕನಾಗಿದ್ದ ಆಂಜಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮದುವೆ ಬಳಿಕವೂ ಆತನೊಂದಿಗೆ  ಸಂಪರ್ಕದಲ್ಲಿದ್ದಳು. ಕೆಲಸ ನಿಮಿತ್ತ ಪತಿ ಯೋಗೇಂದ್ರ ಪುಟ್ಟಪರ್ತಿಗೆ ಹೋದಾಗಲೆಲ್ಲ, ಆಂಜಿಯು ಬೆಂಗಳೂರಿಗೆ  ಬಂದು ಮಂಜುಳಾಳನ್ನು ಭೇಟಿಯಾಗುತ್ತಿದ್ದ.

‘ಆಗಸ್ಟ್‌ 10ರಂದು ಬೆಳಿಗ್ಗೆ ನಗರಕ್ಕೆ ಬಂದಿದ್ದ ಆಂಜಿ ಹಾಗೂ ಮಂಜುಳಾ,  ಒಟ್ಟಿಗೆ ಇರುವುದನ್ನು ಪತಿ ಯೋಗೇಂದ್ರ ನೋಡಿದ್ದರು. ಈ ವೇಳೆ ಆಂಜಿ ಓಡಿ ಹೋಗಿದ್ದ. ಬಳಿಕ, ವಿಜೇಯೇಂದ್ರ ಅವರು ಪತ್ನಿಗೆ ಬುದ್ಧಿವಾದ ಹೇಳಿದ್ದರು.’

ವಿಜೆಯೇಂದ್ರ ನಾಯಕ್ ಗುರುವಾ ಮಲಗಿದ್ದಾಗ ಅಂಜಿಗೆ ಕರೆ ಮಾಡಿದ್ದ ಮಂಜುಳಾ ಮನೆಗೆ ಬರ ಮಾಡಿಕೊಂಡು, ಪತಿಯನ್ನು ಕೊಂದಿದ್ದಾಳೆ. ಬಳಿಕ ಶವವನ್ನು ಬೆಡ್‌ಶೀಟ್‌ನಿಂದ ಸುತ್ತಿದ್ದ ಆರೋಪಿ ಗಳು, ಬಡಾವಣೆಯ ಪೊದೆಯೊಂದರಲ್ಲಿ ಬಿಸಾಕಿದ್ದರು.

ಶುಕ್ರವಾರ ವಿಜೆಯೇಂದ್ರ ನಾಯಕ್ ಪೋಷಕರು ತಮ್ಮ ಮಗನನ್ನು ಸಂಪರ್ಕಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಸೊಸೆ ಮಂಜುಳಾಳನ್ನು ಪ್ರಶ್ನಿಸಿದ್ದಾರೆ. ವಿಜೆಯೇಂದ್ರ ಮನೆಗೂ ಬಂದಿಲ್ಲ, ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿಸಿದ್ದಾಳೆ.

ಶನಿವಾರ ಬೆಳಗ್ಗೆ ಚರಂಡಿ ಬಳಿಶವ ನೋಡಿದ ದಾರಿ ಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಂಜುಳಾಳನ್ನು ವಿಚಾರಣೆ ಮಾಡಿದಾಗ ತಪ್ಪು ಒಪ್ಪಿಕೊಂಡಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com