ರಮ್ಯಾ ಕಾರಿನ ಮೇಲೆ ಮೊಟ್ಟೆ ಎಸೆದ ಆರೋಪ, 8 ಮಂದಿ ಬಂಧನ

ಪಾಕ್ ಪರ ಹೇಳಿಕೆ ನೀಡಿ ಆಕ್ರೋಶಕ್ಕೆ ಕಾರಣರಾಗಿದ್ದ ನಟಿ ಹಾಗೂ ಮಾಜಿ ಮಂಡ್ಯ ಸಂಸದೆ ರಮ್ಯಾ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು 8 ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ.
ರಮ್ಯಾ ಕಾರಿನ ಮೇಲೆ ಮೊಟ್ಟೆ ಎಸೆತ (ಸಂಗ್ರಹ ಚಿತ್ರ)
ರಮ್ಯಾ ಕಾರಿನ ಮೇಲೆ ಮೊಟ್ಟೆ ಎಸೆತ (ಸಂಗ್ರಹ ಚಿತ್ರ)

ಮಂಗಳೂರು: ಪಾಕ್ ಪರ ಹೇಳಿಕೆ ನೀಡಿ ಆಕ್ರೋಶಕ್ಕೆ ಕಾರಣರಾಗಿದ್ದ ನಟಿ ಹಾಗೂ ಮಾಜಿ ಮಂಡ್ಯ ಸಂಸದೆ ರಮ್ಯಾ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಂಗಳೂರು ಪೊಲೀಸರು 8 ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಇಂದು ಕಾರ್ಯಾಚರಣೆ ನಡೆಸಿದ ಕದ್ರಿ ಪೊಲೀಸರು, ಸಂದೀಪ್, ಪ್ರಶಾಂತ್, ಸುಜಿತ್, ಭರತ್, ಸುಭಾಷ್ ಪಡೀಲ್, ಹೇಮಚಂದ್ರ, ಸಂಜಯ್, ರಂಜಿತ್, ಪ್ರದೀಪ್  ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಆಗಸ್ಟ್ 25ರಂದು ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ರಮ್ಯಾ ಅವರ ಕಾರಿನ ಮೇಲೆ ಕದ್ರಿಯಲ್ಲಿ ಪ್ರತಿಭಟನಾಕಾರರು ಮೊಟ್ಟೆಗಳನ್ನು  ಎಸೆದಿದ್ದರು. ಅಲ್ಲದೆ ರಮ್ಯಾ ವಿರುದ್ಧ ಘೋಷಣೆಗಳನ್ನು ಕೂಗಿ ಅವರ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲು ಯತ್ನಿಸಿದ್ದರು.

ಈ ಪ್ರಕರಣ ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಇಂದು ಕಾರ್ಯಾಚರಣೆ ನಡೆಸಿದ ಕದ್ರಿ ಪೊಲೀಸರು ರಮ್ಯಾ ಅವರಿಗೆ ಮೊಟ್ಟೆ ಎಸೆತ ಮತ್ತು  ಅವಾಚ್ಯವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೋಲೀಸರು 9 ಮಂದಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಬಂಧಿತರ ಪೈಕಿ ಸುಭಾಷ್ ಪಡೀಲ್ ಮತ್ತು ಇತರರ ಮೇಲೆ  ಮೊಟ್ಟೆ ಎಸೆದ ಪ್ರಕರಣ ದಾಖಲಾಗಿದ್ದರೆ, ಹೇಮಚಂದ್ರ, ಸಂಜಯ್, ರಂಜಿತ್, ಪ್ರದೀಪ್ ಮತ್ತು ಇತರರ ಮೇಲೆ ರಮ್ಯಾ ಕಾರ್ಯಕ್ರಮಕ್ಕೆ ಬರುವಾಗ ಅಡ್ಡಿಪಡಿಸಿದ ಕುರಿತು ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com