ಬೆಂಗಳೂರು: ವೇಶ್ಯಾವಾಟಿಕೆಗೆ ಸಹಕರಿಸದ ಯುವತಿ ಮೇಲೆ ನೈಜೀರಿಯನ್ ಪ್ರಜೆಗಳ ಅಟ್ಟಹಾಸ

ವೇಶ್ಯಾವಾಟಿಕೆಗೆ ಸಹಕರಿಸದ ಮಹಿಳೆಯನ್ನು ನೈಜೀರಿಯನ್ ಪ್ರಜೆಗಳು 3ನೇ ಮಹಡಿಯಿಂದ ಕೆಳಗೆ ತಳ್ಳಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ವೇಶ್ಯಾವಾಟಿಕೆಗೆ ಸಹಕರಿಸದ ಮಹಿಳೆಯನ್ನು ನೈಜೀರಿಯನ್ ಪ್ರಜೆಗಳು 3ನೇ ಮಹಡಿಯಿಂದ ಕೆಳಗೆ ತಳ್ಳಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಕೊತ್ತನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು 22 ವರ್ಷದ ಫೌಜಿಯಾಳನ್ನು ಮನೆ ಕೆಲಸಕ್ಕಾಗಿ ಎಂದು ಕರೆಸಿಕೊಂಡಿದ್ದರು. ನಂತರ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಯುವತಿ ನಿರಾಕರಿಸಿದ್ದಕ್ಕಾಗಿ 3ನೇ ಮಹಡಿಯಿಂದ ಕೆಳಕ್ಕೆ ತಳ್ಳಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನೈಜೀರಿಯನ್ ಮೂಲದ ಯುವಕನಾದ  ಫರಿದಾ ಮತ್ತು ಶಿರಭೆ ಈ ಕೃತ್ಯ ಎಸಗಿದ್ದಾರೆ.  ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com