ಬೆಂಗಳೂರು: ಸ್ನೇಹಿತರೆದುರು ತಾಯಿ ಬುದ್ಧಿವಾದ; ಮನನೊಂದು ಮಗಳು ಆತ್ಮಹತ್ಯೆ

ಸ್ನೇಹಿತರೆದುರು ತಾಯಿ ಬುದ್ಧಿವಾದ ಹೇಳಿದಕ್ಕೆ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ...
ಆತ್ಮಹತ್ಯೆ
ಆತ್ಮಹತ್ಯೆ
Updated on: 

ಬೆಂಗಳೂರು: ಸ್ನೇಹಿತರೆದುರು ತಾಯಿ ಬುದ್ಧಿವಾದ ಹೇಳಿದಕ್ಕೆ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕೆಂಪಾಪುರದಲ್ಲಿರುವ ಪ್ರೆಸಿಡೆಂಟ್ ಕಾಲೇಜಿನ  ವಿದ್ಯಾರ್ಥಿನಿ 23 ವರ್ಷದ ಸೋಫಿಯಾ ಆತ್ಮಹತ್ಯೆ ಮಾಡಿಕೊಂಡು ದುರ್ಧೈವಿ. ಸೋಫಿಯಾ ಕಾಲೇಜಿನ ಹಾಸ್ಟೆಲ್ ನಲ್ಲಿ ತಂಗಿದ್ದಳು. ಕಾಲೇಜಿನ ಶುಲ್ಕ ಪಾವತಿಸಲು ಸೋಫಿಯಾ ತಾಯಿ ಬಂದಿದ್ದಾಗ ಸೋಫಿಯಾ ಕಾಲೇಜಿನಲ್ಲಿ ಇರಲಿಲ್ಲ. ಹೀಗಾಗಿ ಮರುದಿನ ಮತ್ತೆ ಕಾಲೇಜಿಗೆ ಬಂದಿದ್ದ ತಾಯಿ ಸೋಫಿಯಾಳಿಗೆ ಬುದ್ಧಿವಾದ ಹೇಳಿ ಹೋಗಿದ್ದರು.

ತನ್ನ ಸಹಪಾಠಿಗಳ ಎದುರು ತಾಯಿ ಬುದ್ಧಿವಾದ ಹೇಳಿದ್ದರಿಂದ ಮನನೊಂದ ಸೋಫಿಯಾ ಹಾಸ್ಟೆಲ್ ಕೋಣೆಯಲ್ಲಿದ್ದ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com