ಮರ್ಯಾದಾ ಹತ್ಯೆ ಮಾಡಿದ ಪೋಷಕರಿಗೆ ಜಾಮೀನು ನೀಡಲು ನಿರಾಕರಿಸಿದ ನ್ಯಾಯಾಲಯ

ಮಗಳನ್ನು ಮಾರ್ಯಾದಾ ಹತ್ಯೆ ಮಾಡಿ ಬಂಧನಕ್ಕೊಳಗಾಗಿರುವ ಪೋಷಕರಿಗೆ ಜಾಮೀನು ನೀಡಲು ಮಂಗಳವಾರ ಹೈ ಕೋರ್ಟ್ ನಿರಾಕರಿಸಿದೆ...
ಹೈ ಕೋರ್ಟ್
ಹೈ ಕೋರ್ಟ್
Updated on: 

ಬೆಂಗಳೂರು: ಮಗಳನ್ನು ಮಾರ್ಯಾದಾ ಹತ್ಯೆ ಮಾಡಿ ಬಂಧನಕ್ಕೊಳಗಾಗಿರುವ ಪೋಷಕರಿಗೆ ಜಾಮೀನು ನೀಡಲು ಮಂಗಳವಾರ ಹೈ ಕೋರ್ಟ್ ನಿರಾಕರಿಸಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚಂದ್ರವಾಡಿ ಗ್ರಾಮದ ನಿವಾಸಿಗಳಾದ ಗುರುಮಲ್ಲಪ್ಪ ಮತ್ತು ಮಂಜುಳ ಎಂಬುವವರು ಏ.12 ರಂದು ತಮ್ಮ ಮಗಳನ್ನು ಮರ್ಯಾದಾ ಹತ್ಯೆ ಮಾಡಿದ್ದರು. ಪ್ರಕರಣವನ್ನು ನಿನ್ನೆ ವಿಚಾರಣೆ ನಡೆಸಿದ್ದ ಕೆ.ಎನ್.ಫಣೀಂದ್ರ ಅವರು ಪೋಷಕರಿಗೆ ಜಾಮೀನು ನೀಡಲು ನಿರಾಕರಿಸಿದ್ದಾರೆ.

ಕೆಳಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗುತ್ತೇನೆಂದು ಹೇಳಿದ್ದ ತಮ್ಮ ಮಗಳು ಮಧು ಕುಮಾರಿಗೆ ಏ.12 ರಂದು ವಿಷಯುಕ್ತ ಜ್ಯೂಸ್ ನೀಡಿದ್ದ ಪೋಷಕರು ಮರ್ಯಾದಾ ಹತ್ಯೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪೋಷಕರನ್ನು ತನಿಖೆಗೊಳಪಡಿಸಿದಾಗ ಇಬ್ಬರೂ ತಪ್ಪೊಪ್ಪಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com