ಸಿದ್ದರಾಮಯ್ಯ ವಿರುದ್ಧ ಭುಗಿಲೆದ್ದ ಆಕ್ರೋಶ: ಪ್ರತಿಭಟನೆಗೆ ಜನಜೀವನ ಅಸ್ತವ್ಯಸ್ಥ

ಸಚಿವ ಸ್ಥಾನದಿಂದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಕೈಬಿಟ್ಟಿರುವುದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಆಕ್ರೋಶ ಭುಗಿಲೆದ್ದಿದ್ದು, ಚಾಮರಾಜನಗರ ಹಾಗೂ ನಂಜನಗೂಡಿನಲ್ಲಿ...
ನಂಜನಗೂಡಿನಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲಿಗರು ಸೋಮವಾರ ನಡೆಸಿದ ಪ್ರತಿಭಟನೆ
ನಂಜನಗೂಡಿನಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲಿಗರು ಸೋಮವಾರ ನಡೆಸಿದ ಪ್ರತಿಭಟನೆ
Updated on: 

ಮೈಸೂರು: ಸಚಿವ ಸ್ಥಾನದಿಂದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಕೈಬಿಟ್ಟಿರುವುದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಆಕ್ರೋಶ ಭುಗಿಲೆದ್ದಿದ್ದು, ಚಾಮರಾಜನಗರ ಹಾಗೂ ನಂಜನಗೂಡಿನಲ್ಲಿ ನೀಡಲಾಗಿದ್ದ ಬಂದ್ ಕರೆ ಸೋಮವಾರ ಸಾಮಾನ್ಯ ಜನರ ಜೀವನ ಅಸ್ತವ್ಯಸ್ಥಗೊಳ್ಳುವಂತೆ ಮಾಡಿತ್ತು.

ಶ್ರೀನಿವಾಸ ಪ್ರಸಾದ್ ಬೆಂಬಲಿಗರು ನಿನ್ನೆ ನೀಡಿದ್ದ ಬಂದ್ ಕರೆಗೆ ಚಾಮರಾಜನಗರ ಹಾಗೂ ನಂಜನಗೂಡು ಕ್ಷೇತ್ರಗಳಲ್ಲಿ ಬೆಂಬಲ ವ್ಯಕ್ತವಾಗಿತ್ತು, ಹೋಟೆಲ್, ಅಂಗಡಿ ಮುಗ್ಗಟ್ಟುಗಳು, ಬ್ಯಾಂಕು ಹಾಗೂ ಸಿನಿಮಾ ಹಾಲ್ ಗಳು ಸಂಪೂರ್ಣವಾಗಿ ಬಂದ್ ಆಗಿದ್ದವು.

ಮೈಸೂರು-ನಂಜನಗೂಡಿನ ಎನ್ ಹೆಚ್ 212 ಹೆದ್ದಾರಿಯನ್ನು ಬಂದ್ ಮಾಡಿದ್ದ ಪ್ರತಿಭಟನಾಕಾರರು ಸುಮಾರು 3 ತಾಸುಗಳ ಕಾಲ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದ್ದ ಅವರು, ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

ಇದಲ್ಲದೆ, ರಸ್ತೆಗಳನ್ನು ಬಂದ್ ಮಾಡಿದ್ದ ಕೆಲಸವು ಟೈರ್ ಗಳಿಗೆ ಬೆಂಕಿ ಹಚ್ಚಿದ್ದರು. ಬಂದ್ ಪರಿಣಾಮ ಶ್ರೀಕಾಂತೇಶ್ವರ ದೇಗುಲದ ಮೇಲೂ ಬಿದ್ದಿದ್ದು, ದೇಗುಲಕ್ಕೆ ಬಂದ ಭಕ್ತರು ದೇವರ ದರ್ಶನ ಮಾಡದೆ ಊಟ, ತಿಂಡಿ ಸಿಗದೆ ಪರದಾಡುವಂತಹ ಸ್ಥಿತಿ ಎದುರಾಗಿತ್ತು. ಇದರಂತೆ ಚಾಮರಾಜನಗರದಲ್ಲಿನ ಶಾಲಾ, ಕಾಲೇಜುಗಳಿಗೂ ರಜೆ ಘೋಷಿಸಲಾಗಿತ್ತು. ಅಲ್ಲದೆ, ಖಾಸಗಿ ಬಸ್ ಗಳೂ ಕೂಡ ತನ್ನ ಸೇವೆಯನ್ನು ಸ್ಥಗಿತಗೊಳಿಸಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com