

ಬೆಂಗಳೂರು: ಜನಪ್ರತಿನಿಧಿಗಳಾಗಿದ್ದುಕೊಂಡು ತಮ್ಮ ಸನ್ನದನ್ನು ವಕೀಲರ ಪರಿಷತ್ ಗೆ ಒಪ್ಪಿಸದೆ ಲಾಭ ಅನುಭವಿಸುವ ಮೂಲಕ ಕಾನೂನು ಉಲ್ಲಂಘಟನೆ ಮಾಡುತ್ತಿದ್ದಾರೆಂಬ ಆರೋಪದಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ 8 ನಾಯಕರಿಗೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
ಜನಪ್ರತಿನಿಧಿಗಳಾಗಿದ್ದುಕೊಂಡು ಬಾರ್ ಕೌನ್ಸಿಲ್ ನಿಂದ ಹಲವು ಸವಲತ್ತುಗಳನ್ನು ಪಡೆಯುತ್ತಿದ್ದಾರೆಂದು ಆರೋಪಿಸಿ ಭಾರತೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಟ್ರಸ್ಟ್ ಅಧ್ಯಕ್ಷ ಹುಸೇನ್ ಮೊಯೀನ್ ಫಾರೂಕ್ ಹಾಗೂ ಸದಸ್ಯ ರುದ್ರಪ್ಪ ಅವರು ಹೈ ಕೋರ್ಟ್ ನಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನಿನ್ನೆ ಪರಿಶೀಲನೆ ನಡೆಸಿರುವ ನ್ಯಾಯಮೂರ್ತಿ ಎಚ್.ಬಿಳ್ಳಪ್ಪ ನೇತೃತ್ವದ ಏಕ ಸದಸ್ಯ ಪೀಠವು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಒಟ್ಟು 8 ನಾಯಕರಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದೆ.
ಕೇಂದ್ರ ಕಾನೂನು ಸಚಿವ. ಡಿ.ವಿ.ಸದಾನಂದ ಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ. ಸಂಸದ ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಸಂಚಿವ ಸಂಪುಟದ ಮಂತ್ರಿಗಳಾಗಿರುವ ಆರ್.ವಿ.ದೇಶಪಾಂಡೆ, ಹೆಚ್,ಕೆ.ಪಾಲೀಲ, ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ ಸದಸ್ಯ ಆರ್. ವಿ. ಉಗ್ರಪ್ಪ ಮತ್ತು ಶಾಸಕ ಸುರೇಶ್ ಕುಮಾರ್ ಅವರಿಗೆ ಹೈ ಕೋರ್ಟ್ ನೋಟಿಸ್ ಜಾರಿ ಮಾಡಲು ಆದೇಶಿಸಿದೆ.