ಏಪ್ರಿಲ್ ನಿಂದ ಬೈಯಪ್ಪನಹಳ್ಲಿ-ನಾಯಂಡಹಳ್ಳಿ ಮೆಟ್ರೋ ಸಂಚಾರ ಆರಂಭ

ಪೂರ್ವ-ಪಶ್ಚಿಮ ಕಾರಿಡಾರ್ ನಲ್ಲಿ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯ ನಾಯಯಂಡಹಳ್ಳಿ ಜಂಕ್ಷನ್ ವರೆಗಿನ ಒಟ್ಟು...
ಕಬ್ಬನ್ ಪಾರ್ಕ್,  ವಿಧಾನಸೌಧ ಮತ್ತು ಕೆಂಪೇಗೌಡ ನೆಲದಾಳದ ನಿಲ್ದಾಣಗಳಿಗೆ ಕೆಜೆ ಜಾರ್ಜ್ ಭೇಟಿ ನೀಡಿ ಪರಿಶೀಲಿಸಿದರು.
ಕಬ್ಬನ್ ಪಾರ್ಕ್, ವಿಧಾನಸೌಧ ಮತ್ತು ಕೆಂಪೇಗೌಡ ನೆಲದಾಳದ ನಿಲ್ದಾಣಗಳಿಗೆ ಕೆಜೆ ಜಾರ್ಜ್ ಭೇಟಿ ನೀಡಿ ಪರಿಶೀಲಿಸಿದರು.
Updated on: 
ಬೆಂಗಳೂರು: ಪೂರ್ವ-ಪಶ್ಚಿಮ ಕಾರಿಡಾರ್ ನಲ್ಲಿ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯ ನಾಯಯಂಡಹಳ್ಳಿ ಜಂಕ್ಷನ್ ವರೆಗಿನ ಒಟ್ಟು 18 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಏಪ್ರಿಲ್ ನ ಮೊದಲ ವಾರದಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಬಹುತೇಕ ಪೂರ್ಣಗೊಂಡಿರುವ ಪೂರ್ವ - ಪಶ್ಚಿಮ ಕಾರಿಡಾರ್ ಗಳಿಗೆ ಭೇಟಿ ನೀಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಮೆಜೆಸ್ಟಿಕ್ ನಿಲ್ದಾಣದಲ್ಲಿ ಪೂರ್ವ ಪಶ್ಚಿಮ ಮಾರ್ಗದ ನಿಲ್ದಾಣ ಕಾಮಗಾರಿ 10 ದಿನಗಳಲ್ಲಿ ಪೂರ್ಣ ಗೊಳ್ಳಲಿದೆ ಎಂದು ಹೇಳಿದ್ದಾರೆ. 
ರೈಲ್ವೆ ಸುರಕ್ಷತೆಯಿಂದ ಅನುಮತಿ ದೊರೆತಲ್ಲಿ ಬೈಯಪ್ಪನಹಳ್ಳಿ-ನಾಯಂಡ ಹಳ್ಳಿ ನಡುವಿನ ಇಡೀ 18 ಕಿ.ಮೀ ಉದ್ದದ ಮಾರ್ಗ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ ಎಂದ ಅವರು, ಮಾರ್ಚ್ 25ರ ನಂತರ ಈ ಮಾರ್ಗದ ಪರಿಶೀಲನೆಗೆ ರೈಲ್ವೆ ಸುರಕ್ಷತಾ ಆಯುಕ್ತರು ಭೇಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕಬ್ಬನ್ ಪಾರ್ಕ್,  ವಿಧನಾಸೌಧ ಮತ್ತು ಕೆಂಪೇಗೌಡ ನೆಲದಾಳದ ನಿಲ್ದಾಣಗಳಿಗೆ ಕೆಜೆ ಜಾರ್ಜ್ ಭೇಟಿ ನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com