ಬೇಸಿಗೆಯಿಂದಾಗಿ ಖಾಸಗಿ ನೀರು ಪೂರೈಕೆದಾರರಿಗೆ ಬಂಪರ್ ಲಾಭ

ಈ ಬಾರಿಯ ಬೇಸಿಗೆ ಜನ ಸಾಮಾನ್ಯರನ್ನು ತತ್ತರಿಸುವಂತೆ ಮಾಡಿದ್ದರೇ ಖಾಸಗಿ ನೀರು ಪೂರೈಕೆದಾರರಿಗೆ ಸಖತ್ ಲಾಭ ತಂದು ಕೊಡುತ್ತಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಈ ಬಾರಿಯ ಬೇಸಿಗೆ ಜನ ಸಾಮಾನ್ಯರನ್ನು ತತ್ತರಿಸುವಂತೆ ಮಾಡಿದ್ದರೇ ಖಾಸಗಿ ನೀರು ಪೂರೈಕೆದಾರರಿಗೆ ಸಖತ್ ಲಾಭ ತಂದು ಕೊಡುತ್ತಿದೆ.

ಕರ್ನಾಟಕದ ಇತಿಹಾಸದಲ್ಲೇ ಈ ಪ್ರಮಾಣದಲ್ಲಿ ಬಿಸಿಲ ತಾಪ ಯಾವತ್ತೂ ಏರಿರಲಿಲ್ಲ. ಆದರೆ ಈ ಬಾರಿ ಬೇಸಿಗೆ ಕಾಲ ಅಧಿಕ ತಾಪಮಾನದಿಂದ ದಾಖಲೆ ನಿರ್ಮಿಸಿದೆ.

ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿಗೆ ಬೇಡಿಕೆ ಹೆಚ್ಚುವುದು ಸಾಮಾನ್ಯ, ಆದರೆ ಈ ಬಾರಿಯ ಬೇಸಿಗೆ ಕಳೆದ ವರ್ಷಗಳಿಗಿಂತ  ಮೂರು ಪಟ್ಟು ನೀರಿನ ಬೇಡಿಕೆ ಹೆಚ್ಚುವಂತೆ ಮಾಡಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ವಿವಿಧ ನಗರ ಹಾಗೂ ಪಟ್ಟಣಗಳಲ್ಲಿ ಖಾಸಗಿ ನೀರು ಪೂರೈಕೆದಾರರು ಸಲೀಸಾಗಿ ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಡಬ್ಲ್ಯೂಎಸ್ ಎಸ್ ಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳರು ಜಲ ಮಂಡಳಿ ತನ್ನ 108 ಸರ್ವಿಸ್ ಸ್ಟೇಷನ್ ಗಳಿಗೆ ದಿನವೊಂದಕ್ಕೆ ಸುಮಾರು 150 ಟ್ಯಾಂಕರ್ ನೀರಿನ ಬೇಡಿಕೆ ಬರುತ್ತದೆ. ಹಿಂದಿನ ಬೇಸಿಗೆಯಲ್ಲಿ ದಿವವೊಂದಕ್ಕೆ 75 ಟ್ಯಾಂಕರ್ ನೀರು ಪೂರೈಕೆಗೆ ಬೇಡಿಕೆ ಬರುತ್ತಿತ್ತು, ಆದರೆ ಈ ಸಲ 150 ಟ್ಯಾಂಕರ್ ನೀರಿಗೆ ಡಿಮ್ಯಾಂಡ್ ಬರುತ್ತಿದೆ ಎಂದು ಹೇಳಿದ್ದಾರೆ.

ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಖಾಸಗಿ ನೀರು ಪೂರೈಕೆದಾರರು 10 ಸಾವಿರ ಲೀಟರ್ ನ ಒಂದು ಲೋಡ್ ನೀರಿಗೆ 600 ರು ನಿಂದ 1000 ರುಗೆ ಏರಿಸಿದ್ದಾರೆ. ಈ ಹಿಂದೆ ಒಂದು ಟ್ಯಾಂಕ್ ನೀರಿನ ಬೆಲೆ 500 ರು ಇತ್ತು.

ಈ ಹಿಂದಿನ ಬೇಸಿಗೆಯಲ್ಲಿ ಖಾಸಗಿ ನೀರು ಪೂರೈಕೆದಾರರಿಗೆ ದಿನವೊಂದಕ್ಕೆ 50-60 ಟ್ಯಾಂಕರ್ ನೀರಿನ ಬೇಡಿಕೆ ಇತ್ತು, ಆದರೆ ಈ ವರ್ಷದ ಬೇಸಿಗೆಯಲ್ಲಿ 100-120 ಕರೆಗಳು ಬರುತ್ತಿವೆ ಎಂದು ಕೆ. ಆರ್ ಪುರಂ ನ ಖಾಸಗಿ ನೀರು ಪೂರೈಕೆದಾರರೊಬ್ಬರು ತಿಳಿಸುತ್ತಾರೆ.

ಖಾಸಗಿ ನೀರು ಪೂರೈಕೆದಾರರು ತಮ್ಮ ನೀರು ಶುದ್ದವಾಗಿದೆ ಎಂದು ಹೇಳುತ್ತಾರೆ, ಆದರೆ ಇದಕ್ಕೆ ಯಾವುದೇ ಸಾಕ್ಷಿ ಪುರಾವ ಇಲ್ಲ ಎಂದು ಜಲ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

1999 ರಲ್ಲಿ ರೂಪಿಸಿದ ಕರ್ನಾಟಕ ಅಂತರ್ಜಲ ಕರಡು ಮಸೂದೆ  (ಕುಡಿಯುವ ನೀರಿನ ಮೂಲಗಳು ರಕ್ಷಣೆಯ ನಿಯಂತ್ರಣ) ಸಾರ್ವಜನಿಕ ನೀರಿನ ಮೂಲಗಳ 500 ಮೀಟರ್ ವ್ಯಾಪ್ತಿಯಲ್ಲಿ ಯಾರು ಬೋರ್ ವೆಲ್ ಕೊರೆಸಬಾರದು ಎಂಬ ನಿಯಮವಿದೆ. ಆದರೆ ಮಸೂದೆ ಇನ್ನು ಮಸೂದೆ ಜಾರಿಯಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com