ಸ್ವಚ್ಛ ಭಾರತ ಅಭಿಯಾನ ಎಫೆಕ್ಟ್; ಮೈಸೂರಿನಲ್ಲಿ ಗರಿಗೆದರಿದ ಸ್ವಚ್ಛತಾ ಆಂದೋಲನ

ಭಾರತವನ್ನು ಸ್ವಚ್ಛತಾ ರಾಷ್ಟ್ರವಾಗಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಕೆಲ ಸರ್ಕಾರಗಳು ಇದರಲ್ಲಿ ತನ್ನ ಪಾತ್ರವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದರೆ...
ಸ್ವಚ್ಛ ಭಾರತ ಅಭಿಯಾನ ಎಫೆಕ್ಟ್; ಮೈಸೂರಿನಲ್ಲಿ ಗರಿಗೆದರಿದ ಸ್ವಚ್ಛತಾ ಆಂದೋಲನ
ಸ್ವಚ್ಛ ಭಾರತ ಅಭಿಯಾನ ಎಫೆಕ್ಟ್; ಮೈಸೂರಿನಲ್ಲಿ ಗರಿಗೆದರಿದ ಸ್ವಚ್ಛತಾ ಆಂದೋಲನ
Updated on: 

ಮೈಸೂರು: ಭಾರತವನ್ನು ಸ್ವಚ್ಛತಾ ರಾಷ್ಟ್ರವಾಗಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಕೆಲ ಸರ್ಕಾರಗಳು ಇದರಲ್ಲಿ ತನ್ನ ಪಾತ್ರವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದರೆ, ಮೈಸೂರಿನಲ್ಲಿ ಮಾತ್ರ ಸ್ವಚ್ಛ ಭಾರತ ಆಂದೋಲನ ಗರಿಗೆದರಿದೆ.

ಮೈಸೂರಿನಲ್ಲಿ ಕಳೆದ ಕೆಲ ತಿಂಗಳಿಂದ ಸ್ವಚ್ಛ ಭಾರತ ಆಂದೋಲನ ಭರದಿಂದ ಸಾಗುತ್ತಿದೆ. ಪ್ರತಿ ನಿತ್ಯ 50ಕ್ಕೂ ಹೆಚ್ಚು ಸಾರ್ವಜನಿಕ ಕಚೇರಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಇದರಂತೆ 2 ರಿಂದ 4 ಪುರಸಭೆಯ ವಲಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಸ್ವಚ್ಛತೆಗೆ ಇಲ್ಲಿನ ಸಿಬ್ಬಂದಿಗಳೂ ಕೈ ಜೋಡಿಸಿದ್ದಾರೆ.

ಅಂದೋಲನದ ಮೂಲಕ ಸಾಕಷ್ಟು ಕಚೇರಿಗಳಲ್ಲಿ ಅರಿವು ಮೂಡಿಸಲಾಗುತ್ತಿದ್ದು, ಸಾಕಷ್ಟು ಸಿಬ್ಬಂದಿಗಳು ಆಂದೋಲನದ ಕುರಿತಂತೆ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಕೆಲ ಕಚೇರಿಗಳಲ್ಲಿ ಹಳೆಯ ಪೀಠೋಪಕರಣಗಳು ಹಾಗೂ ಕೆಲಸಕ್ಕೆ ಬಾರದ ವಸ್ತುಗಳನ್ನು ತೆಗೆದುಹಾಕಲಾಗಿದೆ. ಇದರಿಂದ ಕಚೇರಿಗಳು ಮತ್ತಷ್ಟು ವಿಶಾಲವಾಗಿ ಕಾಣುವಂತಾಗಿದೆ. ಈ ಆಂದೋಲನ ಇನ್ನೂ 15 ದಿನಗಳ ಕಾಲ ಮುಂದುವರೆಯಲಿದೆ ಎಂದು ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಅವರು ಹೇಳಿದ್ದಾರೆ.

ಇನ್ನು ಇದಲ್ಲದೆ, ಆಂದೋಲನದ ಮೂಲಕ ಪ್ಲಾಸ್ಟಿಕ್ ನ್ನು ನಿಷೇಧ ಕುರಿತಂತೆ ಮಾಹಿತಿ ನೀಡಲಾಗುತ್ತಿದ್ದು, ಸಿಬ್ಬಂದಿಗಳು ಪ್ಲಾಸ್ಟಿಕ್ ಫೈಲ್ ಗಳು ಹಾಗೂ ಕವರ್ ಗಳನ್ನು ಕಚೇರಿಗೆ ತರದಿರುವಂತೆ ಹೇಳಲಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com