ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ನಿಖರ ಆಧಾರ್ ಸಂಖ್ಯೆ ಮತ್ತು ಇತರ ವಿವರಗಳನ್ನು ತಯಾರು ಮಾಡಿಟ್ಟುಕೊಳ್ಳುವಂತೆ ಮಾಹಿತಿ ನೀಡಲಾಗಿದೆ. ಅದು ಹೊರಡಿಸಿರುವ ಅಧಿಸೂಚನೆಯಲ್ಲಿ, '' ಜೆಇಇ ಮುಖ್ಯ ಪರೀಕ್ಷೆ-2017 ರ ಪ್ರವೇಶ ಅಧಿಸೂಚನೆ ಪ್ರಕಾರ, ಪ್ರತಿ ಅರ್ಜಿದಾರನು ನಿಖರವಾದ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅಭ್ಯರ್ಥಿ ನೀಡಿರುವ ಮಾಹಿತಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ ದಾಖಲೆಗಳಿಗೆ ಮತ್ತು ಶಾಲೆಯಲ್ಲಿರುವ ವಿದ್ಯಾರ್ಥಿಗಳ ದಾಖಲೆಗಳಿಗೆ ಹೊಂದಿಕೆಯಾಗಬೇಕು. ಒಂದು ವೇಳೆ ಹೊಂದಾಣಿಕೆಯಾಗದಿದ್ದರೆ ಕೂಡಲೇ ಆಧಾರ್ ದಾಖಲೆಗಳನ್ನು ಅಥವಾ ಶಾಲೆಯಲ್ಲಿನ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು'' ಎಂದು ತಿಳಿಸಲಾಗಿದೆ.