ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಡ್ರಗ್ಸ್ ಮಾರಲು ಯತ್ನಿಸುತ್ತಿದ್ದ ಇಬ್ಬರು ನೈಜಿರಿಯಾ ಪ್ರಜೆಗಳ ಬಂಧನ

ಕೊಕೇನ್ ಎಂಬ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ನೈಜಿರಿಯಾ ಪ್ರಜೆಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ....

ಬೆಂಗಳೂರು: ಕೊಕೇನ್ ಎಂಬ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ನೈಜಿರಿಯಾ ಪ್ರಜೆಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಚೈನೇದು ಒಬಲಿ ಹಾಗೂ ಸೋಪುರುಚಿ ಮೆನ್ಷಾ ಗಾಡ್ ವಿನ್ ಎಂಬ ವಿದ್ಯಾರ್ಥಿಗಳನ್ನು  ಬೆಂಗಳೂರಿನ ಚಿಕ್ಕಗುಬ್ಬಿ ಎಂಬ ಪ್ರದೇಶದಲ್ಲಿ ಪೋಲೀಸರು ಬಂಧಿಸಿದ್ದಾರೆ.

ಚಿಕ್ಕಗುಬ್ಬಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾದ ಇಬ್ಬರು 10 ಗ್ರಾಂ ಕೋಕೇನ್ ಅನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ವಿದೇಶಿಯರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಮುಂಬೈಯಲ್ಲಿ ಮತ್ತೊಬ್ಬ ನೈಜಿರಿಯನ್ ಪ್ರಜೆಯಿಂದ ಅದನ್ನು ಖರೀದಿಸಿದ್ದರು.

ಈ ಇಬ್ಬರು ಸ್ಟುಡೆಂಟ್ ವೀಸಾ ಮೇಲೆ ಭಾರತಕ್ಕೆ ಬಂದಿದ್ದು, ಸೆಪ್ಟಂಬರ್ 17 2017 ಕ್ಕೆ ವೀಸಾ ಅವಧಿ ಅಂತ್ಯಗೊಳ್ಳಲಿದೆ, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com