ಬೆಂಗಳೂರು: ಫ್ಯಾನ್ಸಿ ನಂಬರ್ ಗಾಗಿ ಮಂಗಳೂರಿನ ಉದ್ಯಮಿ ಪಾವತಿಸಿದ ಹಣವೆಷ್ಟು ಗೊತ್ತೆ?

ತಮ್ಮ ವಾಹನಗಳಿಗೆ ಫ್ಯಾನ್ಸಿ ನಂಬರ್ ಹಾಕಿಸಿ ನೋಂದಾಯಿಸಿಕೊಳ್ಳುವವರ ಸಂಖ್ಯೆಯೇನು ಕಡಿಮೆ ಇಲ್ಲ. ಹಣ ಇರುವವರು ತಮಗೆ ಬೇಕಾದ ನಂಬರ್ ಪಡೆಯಲು ಎಷ್ಟು ..
ಉದ್ಯಮಿ ಖರೀದಿಸಿದ ಫ್ಯಾನ್ಸಿ ನಂಬರ್
ಉದ್ಯಮಿ ಖರೀದಿಸಿದ ಫ್ಯಾನ್ಸಿ ನಂಬರ್

ಬೆಂಗಳೂರು: ತಮ್ಮ ವಾಹನಗಳಿಗೆ ಫ್ಯಾನ್ಸಿ ನಂಬರ್ ಹಾಕಿಸಿ ನೋಂದಾಯಿಸಿಕೊಳ್ಳುವವರ ಸಂಖ್ಯೆಯೇನು ಕಡಿಮೆ ಇಲ್ಲ. ಹಣ ಇರುವವರು ತಮಗೆ ಬೇಕಾದ ನಂಬರ್ ಪಡೆಯಲು ಎಷ್ಟು ಬೇಕಾದರೂ ದುಡ್ಡು ಪಾವತಿಸುತ್ತಾರೆ.

ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ಹರಾಜಿನಲ್ಲಿ ಮಂಗಳೂರು ಮೂಲದ ಉದ್ಯಮಿಯೊಬ್ಬರು 2.77 ಲಕ್ಷ ಹಣ ನೀಡಿ KA-661 ಸಂಖ್ಯೆಯ ಫ್ಯಾನ್ಸಿ ನಂಬರ್ ಖರೀದಿಸಿದ್ದಾರೆ.

ಚಿಕ್ಕಮಗಳೂರು ಆರ್ ಟಿ ಓ ಅಧಿಕಾರಿಗಳು ತರಿಕೆರೆಯಲ್ಲಿ ಫ್ಯಾನ್ಸಿ ನಂಬರ್ ಹರಾಜು ಏರ್ಪಡಿಸಿದ್ದರು. ಇದರಲ್ಲಿ ಕೇವಲ ಕೆಲವೇ ಮಂದಿ ಮಾತ್ರ  ಭಾಗವಹಿಸಿದ್ದರು. ಇದೇ ಹರಾಜು ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ನಡೆಸಿದ್ದಾರೆ ಈ ಫ್ಯಾನ್ಸಿ ನಂಬರ್ ಗೆ ಹೆಚ್ಚಿನ ಬೇಡಿಕೆ ಬರುತ್ತಿತ್ತು ಎಂದು ಪ್ರಾದೇಶಿಕ ಸಾರಿಗೆ ಜಂಟಿ ಆಯುಕ್ತ ಮಾರುತಿ ಸಾಂಬ್ರಾಣಿ ಹೇಳಿದ್ದಾರೆ.

ಸಾಮಾನ್ಯವಾಗಿ ಹರಾಜು ಪ್ರಕ್ರಿಯೆಯಲ್ಲಿ ಯಾವಾಗಲು 15 ಮಂದಿ ಭಾಗವಹಿಸುತ್ತಿದ್ದರು, ಆದರೆ ಈ ಬಾರಿ ಕೇವಲ 3 ಅರ್ಜಿಗಳು ಮಾತ್ರ ಬಂದಿದ್ದವು. KA-66-5555 ನಂಬರ್ ಅನ್ನು ವ್ಯಕ್ತಿಯೊಬ್ಬರು 76 ಸಾವಿರ ರೂ ನೀಡಿ ಖರೀದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com