ತುಮಕೂರಿನ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಾವು: ಆಹಾರದಲ್ಲಿ ವಿಷ ಬೆರಕೆ ದೃಢ

ಕಳೆದ ಮಾರ್ಚ್ 9ರಂದು ಆಹಾರ ಸೇವಿಸಿ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳು ಮತ್ತು ಓರ್ವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ತುಮಕೂರು: ಕಳೆದ ಮಾರ್ಚ್ 9ರಂದು ಆಹಾರ ಸೇವಿಸಿ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳು ಮತ್ತು ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ವರದಿ ನೀಡಿರುವ ವಿಧಿವಿಜ್ಞಾನ ಪ್ರಯೋಗಾಲಯ ಆಹಾರದಲ್ಲಿ ವಿಷ ಬೆರಕೆಯಾಗಿತ್ತು ಎಂದು ದೃಢಪಡಿಸಿದೆ. ವಿಷಕಾರಿ ರಾಸಾಯನಿಕ ಕಬ್ಬಿಣದ ಫಾಸ್ಫೈಡ್ ಆಹಾರದಲ್ಲಿ ಸೇರಿತ್ತು ಎಂದು ವರದಿಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಹಾರದಲ್ಲಿ ಕಬ್ಬಿಣದ ಫಾಸ್ಫೈಡ್(Iron phosphide) ಎಂಬ ವಿಷಕಾರಿ ರಾಸಾಯನಿಕ ಸೇರ್ಪಡೆಯಾಗಿತ್ತು ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ದೃಢಪಡಿಸಿದೆ ಎಂದು ತುಮಕೂರು ಪೊಲೀಸ್ ಸೂಪರಿಂಟೆಂಡೆಂಟ್ ಇಶಾ ಪಂತ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ತುಮಕೂರಿನ ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳು ಮತ್ತು ಸೆಕ್ಯೂರಿಟಿಯೊಬ್ಬರು ಮಾರ್ಚ್ 9ರಂದು ರಾತ್ರಿ ಊಟವಾದ ನಂತರ ತೀವ್ರ ಅಸ್ವಸ್ಥಕ್ಕೀಡಾಗಿದ್ದರು. ವಾಂತಿ ಮಾಡಲು ಆರಂಭಿಸಿದರು. ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗದೆ ಮೃತಪಟ್ಟಿದ್ದರು. ಈ ಶಾಲೆಯನ್ನು ಬಿಜೆಪಿಯ ಮಾಜಿ ಶಾಸಕ ಕಿರಣ್ ಕುಮಾರ್ ನಡೆಸುತ್ತಿದ್ದಾರೆ.
ಇದೊಂದು ಉದ್ದೇಶಪೂರ್ವಕವಾಗಿ ನಡೆಸಿದ ಕುಕೃತ್ಯವೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಿರಣ್ ಕುಮಾರ್ ಅವರನ್ನು ಮಾರ್ಚ್ 11ರಂದು ಬಂಧಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com