

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅಕ್ರಮ ಆಸ್ತಿ ಕೇಸ್ ನಲ್ಲಿ ವಿಶೇಷ ರಜೆ ಅರ್ಜಿ ಸಲ್ಲಿಕೆಗಾಗಿ ಕರ್ನಾಟಕ ಸರ್ಕಾರ 2.78 ಕೋಟಿ ರು ಹಣ ಖರ್ಟು ಮಾಡಿದೆ.
ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಪ್ರಕರಣದಲ್ಲಿ ಸ್ಪೆಷಲ್ ಕೋರ್ಟ್ ಜಯಲಲಿತಾ ಅವರನ್ನು ನಿರ್ದೋಷಿ ಎಂದು ಹೇಳಿ ತೀರ್ಪು ನೀಡಿತ್ತು, ಈ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್ ಗೆ ಎಸ್ ಎಲ್ ಪಿ ಸಲ್ಲಿಸಿತ್ತು.
ಮಾಹಿತಿ ಕೋರಿ ಬೆಂಗಳೂರು ಮೂಲದ ಆರ್ ಟಿ ಐ ಕಾರ್ಯಕರ್ತ ನರಸಿಂಹ ಮೂರ್ತಿ ಅರ್ಜಿ ಸಲ್ಲಿಸಿದ್ದರು. ಎಸ್ ಎಲ್ ಪಿಗಾಗಿ ರಾಜ್ಯ ಸರ್ಕಾರ 2,78,70,888 ರು ಖರ್ಟು ಮಾಡಿದೆ ಎಂದು ತಿಳಿದು ಬಂದಿದೆ.
ಇದರಲ್ಲಿ ಹಿರಿಯ ವಕೀಲ ಬಿ.ವಿ ಆಚಾರ್ಯ ಅವರಿಗೆ 1.06 ಕೋಟಿ, ದುಶ್ಯಂತ್ ದಾವೆಗೆ 95,16 ಲಕ್ಷ, ಜೋಸೆಫ್ ಅರಿಸ್ಟಾಟಲ್ ಅವರಿಗೆ 32.01 ಮತ್ತು ಸಂದೇಥ್ ಚೌತ ಗೆ 42.23 ಲಕ್ಷ ಹಣ ನೀಡಲಾಗಿದೆ. ಅಡ್ವೊಕೇಟ್ ಜನರಲ್ ಮಧುಸೂದನ್ ಆರ್ ನಾಯಕ್ ಅವರಿಗೆ 2.43 ಲಕ್ಷ ಹಣ ನೀಡಲಾಗಿದೆ ಎಂದು ತಿಳಿದು ಬಂದಿದೆ.