ಬೆಂಗಳೂರಲ್ಲಿ ನಾಳೆ ಐಪಿಎಲ್ ಮ್ಯಾಚ್: ಬಿಎಂಟಿಸಿಯಿಂದ ಹೆಚ್ಚುವರಿ ಬಸ್

ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುವ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ತೊಂದರೆಯಾಗಬಾರದೆಂಬ ...
ಐಪಿಎಲ್
ಐಪಿಎಲ್
ಬೆಂಗಳೂರು: ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುವ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆ ಒದಗಿಸಲಿದೆ.
ಸಂಜೆ5 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಹೆಚ್ಚುವರಿ ಬಸ್ ಸಂಚರಿಸಲಿವೆ ಎಂದು ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಾಜಿನಗರ -ಕಾಡುಗೋಡಿ ಬಸ್ ಸ್ಟಾಂಡ್-1ಕೆ, ಮೇಯೋ ಹಾಲ್ ಸರ್ಜಾಪುರ-ಜಿ2, ಬ್ರಿಗೇಡ್ ರೋಡ್- ಎಲೆಕ್ಟ್ರಾನಿಕ್ ಸಿಟಿ-ಜಿ3, ಬ್ರಿಗೇಡ್ ರೋಡ್-ಬನ್ನೇರುಘಟ್ಟ-ಜಿ4, ಚಿನ್ನಸ್ವಾಮಿ ಸ್ಟೇಡಿಯಂ- ಕೆಂಗೇರಿ-ಜಿ6, ಬಿಆರ್ ವಿ ಪೆರೇಡ್ ಗ್ರೌಂಡ್- ಜನಪ್ರಿಯ ಟೌನ್ ಶಿಪ್-ಜಿ7, ಎಂಜಿ ರಸ್ತೆ ಮೆಟ್ರೋ ಸ್ಟೇಷಮ್- ನೆಲಮಂಗಲ 5ನೇ ಹಂತ-ಜಿ9, ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚರಿಸಲಿವೆ.
ಇನ್ನೂ ಐಪಿಎಲ್ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಬೆಂಗಳೂರು ಸಂಚಾರಿ ಪೊಲೀಸರು ಸೇಂಟ್ ಜೊಸೆಪ್ ಶಾಲಾ ಮೈದಾನ, ಸೇಂಟ್ ಮಾರ್ಕ್ ಕ್ಯಾಥೆಡ್ರೆಲ್ ಚರ್ಚೆ ಮತ್ತು ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com