ಕಾಫಿ ಸುವಾಯನೆಯ ಅಂಚೆಚೀಟಿ
ಕಾಫಿ ಸುವಾಯನೆಯ ಅಂಚೆಚೀಟಿ

ಬೆಂಗಳೂರು: ಕಾಫಿ ಸುವಾಸನೆಯ ಅಂಚೆ ಚೀಟಿ ಬಿಡುಗಡೆ

ಅಂಚೆ ಇಲಾಖೆ ಕಾಫಿ ಸುವಾಸನೆಯ ಅಂಚೆಚೀಟಿಯನ್ನು ಬೆಂಗಳೂರಿನ ಕೇಂದ್ರ...
ಬೆಂಗಳೂರು: ಅಂಚೆ ಇಲಾಖೆ ಕಾಫಿ ಸುವಾಸನೆಯ ಅಂಚೆಚೀಟಿಯನ್ನು ಬೆಂಗಳೂರಿನ ಕೇಂದ್ರ ಅಂಚೆ ಕಚೇರಿಯಲ್ಲಿ ಬಿಡುಗಡೆ ಮಾಡಿದೆ.
ಕಡು ಕಂದು ಬಣ್ಣದ ಚಿಕಣಿ ಶೀಟ್ ಸ್ಟಾಂಪ್ ನಲ್ಲಿ ಕಾಫಿ ಬೀಜ, ಕಾಫಿ ಲೋಟ ಮತ್ತು ಕುದಿಸುವ ಕಪ್ ನ ಚಿತ್ರವಿದೆ. ಅಂಚೆಚೀಟಿಯನ್ನು ಉಜ್ಜಿದಾಗ ಕಾಫಿಯ ಸುವಾಸನೆ ಬರುತ್ತದೆ. ಅಂಚೆ ಇಲಾಖೆ 2 ಲಕ್ಷ ಸ್ಟಾಂಪ್ ಗಳನ್ನು ಪ್ರಿಂಟ್ ಮಾಡಿದ್ದು ಪ್ರತಿ ಅಂಚೆಚೀಟಿಯ ಬೆಲೆ 100 ರೂಪಾಯಿಯಾಗಿದೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು.

Related Stories

No stories found.

Advertisement

X
Kannada Prabha
www.kannadaprabha.com