ಪ್ರಯಾಣಿಕರಿಗೆ ಸಿಹಿ ಸುದ್ದಿ, ಬಿಎಂಟಿಸಿ ವೋಲ್ವೊ ಬಸ್ ಪಾಸ್ ದರ ಶೇ.10ರಷ್ಟು ಇಳಿಕೆ!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ವೋಲ್ವೊ ಬಸ್ ಮಾಸಿಕ ಪಾಸ್ ದರ ಇಳಿಕೆ ಮಾಡಿದೆ...
ವೋಲ್ವೊ ಬಸ್
ವೋಲ್ವೊ ಬಸ್
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ವೋಲ್ವೊ ಬಸ್ ಮಾಸಿಕ ಪಾಸ್ ದರ ಇಳಿಕೆ ಮಾಡಿದೆ. 
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವೋಲ್ವೊ ಬಸ್ ಪಾಸ್ ದರ ಇಳಿಸಲು ಅನುಮೋದನೆ ನೀಡಲಾಗಿದ್ದು, ಶೇಕಡ 10ರಷ್ಟು ಇಳಿಕೆ ಮಾಡಲಾಗಿದೆ ಎಂದರು. 
ದರ ಇಳಿಕೆ ಹಿನ್ನೆಲೆ 3,910 ರು. ಇದ್ದ ಪಾಸ್ ದರ 3,570 ರುಪಾಯಿ, 4,197 ರು.ಗಳಿದ್ದ ಪಾಸ್ ದರ 3,832 ರು.ಗೆ ಹಾಗೂ 4,600 ರು.ಗಳಿದ್ದ ಪಾಸ್ ದರ 3,990 ರುಪಾಯಿಗೆ ಇಳಿಕೆ ಮಾಡಲಾಗಿದೆ. 
ದರ ಇಳಿಕೆ ಪ್ರಸ್ತಾವನೆಗೆ ಸರ್ಕಾರ ಅಂಕಿತ ಹಾಕಿರುವುದರಿಂದ ಪರಿಷ್ಕರಣೆ ಜಾರಿ ದಿನಾಂಕ ಶೀಘ್ರದಲ್ಲೇ ಪ್ರಕಟಿಸುವುದಾಗಿ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com