ರಷ್ಯಾ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿದೆ. ಜೊತೆಗೆ ಎಲ್ಲಾ ನೆರೆಹೊರೆಯ ರಾಷ್ಟ್ರಗಳಿಂದ ಪ್ರತ್ಯೇಕಗೊಳಿಸಲಾಗುತ್ತಿದೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಷ್ಯಾ ದೇಶ ಪಾಕಿಸ್ತಾನಕ್ಕೆ ಆಯುಧಗಳನ್ನು ಪೂರೈಸುವಂತಹ ಪ್ರಸಂಗ ನಿರ್ಮಿಸಿದೆ. ಭಾರತ ಹಾಗೂ ಭೂತಾನ್ ಯಾವಾಗಲೂ ಸ್ನೇಹದಿಂದ ಇದ್ದು, ಭೂತಾನ್‌ಗೆ ಏನಾದರೂ ಸಮಸ್ಯೆಯಾದರೆ, ಭಾರತ ಅವರ ರಕ್ಷಣೆಗೆ ಇರುತ್ತದೆ ಎಂದು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗ ಚೀನಾ ಸೈನಿಕರು ಭೂತಾನ್ ಗಡಿ ಪ್ರವೇಶ ಮಾಡಿದ್ದಾಗ ನಮ್ಮ ಸೈನಿಕರು ಅವರನ್ನು ತಡೆದಿದ್ದಾರೆ. ಚೀನಾ ಸೈನಿಕರು ಏಕೆ ಭೂತಾನ್ ಪ್ರವೇಶಿಸಿದರು ಎಂಬುದನ್ನು ಮೋದಿ ದೇಶದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.