ಮೈಸೂರು: ಯುವಜನತೆ ಕೆಲಸಕ್ಕೆ ಸೇರಿ, ತನ್ನ ಮೊದಲ ತಿಂಗಳ ಸಂಬಳದಲ್ಲಿ ತನ್ನ ತಂದೆ-ತಾಯಿಗಳಿಗೆ ಉಡುಗೊರೆ ಕೊಡಿಸುವುದು ಇಲ್ಲವೇ ತನಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವುದು ಸಾಮಾನ್ಯ. ಆದರೆ ಮೈಸೂರಿನ ಈ ಯುವತಿ ತನ್ನ ಮೊದಲ ತಿಂಗಳ ಸಂಬಳದಲ್ಲಿ ಶಾಲೆಯಲ್ಲಿ ಶೌಚಾಲಯ ನಿರ್ಮಿಸಿ ಯುವಜನತೆಗೆ ಸ್ಫೂರ್ತಿಯಾಗಿದ್ದಾಳೆ.