ಮಗಳ ಸಾವಿನಿಂದ ತೀವ್ರ ಕಂಗೆಟ್ಟಿದ್ದ ಪೋಷಕರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಿನ್ನೆ ಪ್ರತಿಭಟನೆ ನಡೆಸಿದ್ದರು. ತಡರಾತ್ರಿ ಬಾಲಕಿಯ ಶವವನ್ನು ನಗರದ ಅಂಬೇಡ್ಕರ್ ವೃತ್ತಕ್ಕೆ ತಂದು ಧರಣಿ ಆರಂಭಿಸಿದ್ದರು. ಆನೇಕ ಸಂಘಟನೆಗಳು ಧರಣಿಗೆ ಸಾಥ್ ನೀಡಿದ್ದವು. ಬಳಿಕ ಜಿಲ್ಲಾ ಸಚಿವ ಎಂ.ಬಿ. ಪಾಟೀಲ್ ಅವರು ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಬಾಲಕಿಯ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು.