ರೈಲ್ವೆ ಮಂಡಳಿ ಮತ್ತು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಮಧ್ಯೆ ನಡೆದಿರುವ ಮಾತುಕತೆಯಂತೆ, ಕೇರಳ ಸರ್ಕಾರ ವಿಸ್ತೃತ ವರದಿಯನ್ನು ತಯಾರಿಸಿ ಇದೇ 31ರೊಳಗೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಸಲ್ಲಿಸುವ ಕುರಿತು ನಿರ್ಧಾರ ಮಾಡಲಾಯಿತು. ಕರ್ನಾಟಕ ಕೊಡಗು ಜಿಲ್ಲೆಯಲ್ಲಿ ಉದ್ದೇಶಿತ ರೈಲ್ವೆ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಲೋಕಸಭೆಯಲ್ಲಿ ನಿನ್ನೆ ಸಚಿವ ಪಿಯೂಷ್ ಗೋಯಲ್ ಯೋಜನೆಯ ವರದಿಯನ್ನು ಮಂಡಿಸಿದರು. ಕೇರಳ ಮತ್ತು ಕರ್ನಾಟಕ ಸರ್ಕಾರಗಳೆರಡೂ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ.