ಗಂಗಾವತಿ: ಪೋಲೀಸ್ ಠಾಣೆ ಎದುರು ಮಹಿಳೆ ಆತ್ಮಹತ್ಯೆ ಯತ್ನ

Published On :
ಗಂಗಾವತಿ: ಪೊಲೀಸ್ ಠಾಣೆಯ ಎದುರು ಮಹಿಳೆಯೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.
ಸುಳ್ಳು ಆರೋಪದಿಂದ ನೊಂದು ಆತ್ಮಹತ್ಯೆ ಪ್ರಯತ್ನ: ಠಾಣೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮೇಲೆ ತಿಂಗಳ ಹಿಂದೆ ಅಂಜನಾದ್ರಿ ದೇವಾಲಯದ ಅರ್ಚಕರೊಡನೆ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಕೇಳಿ ಬಂದಿತ್ತು. ಆ ಸಂಬಂಧ ಫೋಟೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ತನ್ನ ಮೇಲಿನ ಈ ಸುಳ್ಳು ಆರೋಪದಿಂದ ತೀವ್ರವಾಗಿ ಮನನೊಂದಿದ್ದ ಮಹಿಳೆ ಇಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ
ಇದಕ್ಕೂ ಮುನ್ನ ಮಾದ್ಯಮದವರ ಮುಂದೆ ಮಾತನಾಡಿದ ಈಕೆ "15 ವರ್ಷಗಳಿಂದ ತಾನು ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದು ಬಾಬಾ ಹಾಗೂ ನನ್ನ ನಡುವೆ ಯಾವುದೇ ಅಕ್ರಮ ಸಂಬಂಧವಿಲ್ಲ. ಆರೋಪವು ಆಧಾರರಹಿತವಾಗಿದ್ದರೂ ಸಹ ಗ್ರಾಮಸ್ಥರ ಭಯದ ಕಾರಣ ನಾನು ಎರಡು ತಿಂಗಳಿನಿಂದ ಕುಟುಂಬದೊಂದಿಗೆ ಗ್ರಾಮ ತೊರೆದಿದ್ದೇನೆ. ಆದರೆ ಇದೀಗ ನಾನು ಗ್ರಾಮಕ್ಕೆ ವಾಪಾಸಾದದ್ದಾದರೆ ನನ್ನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರ ಹಿಂದೆ ದೇವಾಲಯದ ಕೆಲಸಗಾರರ ಕೈವಾಡ ಇದೆ" ಎಂದು ಹೇಳಿದ್ದಾರೆ.
ನನ್ನ ಮೇಲಿನ ಆರೋಪ ನನ್ನ ಮಗಳ ಭವಿಷ್ಯದ ಮೇಲೆಯೂ ಪರಿಣಾಮ ಬೀರಿದ್ದು ಯಾವುದೋ ಸಂಚಿಗೆ ಬಡವರಾದ ನಮ್ಮನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


