ಮೇಲಧಿಕಾರಿಯಿಂದ ಕಿರುಕುಳ: ನೊಂದ ಮಹಿಳೆ ಆತ್ಮಹತ್ಯೆಗೆ ಶರಣು

ಮೇಲಧಿಕಾರಿ ಕಿರುಕುಳ ನೀಡಿದ ಕಾರಣಕ್ಕೆ ನೊಂದು ಕೆ.ಆರ್.ಪುರ ತಾಲೂಕು ಕಚೇರಿ ಪ್ರೊಬೆಷನರಿ ಮಹಿಳಾ ಗ್ರಾಮ ಲೆಕ್ಕಿಗರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮಮೂರ್ತಿ ನಗರ ಸಮೀಪದ ಹೊಯ್ಸಳ ನಗರದಲ್ಲಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಮೇಲಧಿಕಾರಿ ಕಿರುಕುಳ ನೀಡಿದ ಕಾರಣಕ್ಕೆ ನೊಂದು ಕೆ.ಆರ್.ಪುರ ತಾಲೂಕು ಕಚೇರಿ ಪ್ರೊಬೆಷನರಿ ಮಹಿಳಾ ಗ್ರಾಮ ಲೆಕ್ಕಿಗರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮಮೂರ್ತಿ ನಗರ ಸಮೀಪದ ಹೊಯ್ಸಳ ನಗರದಲ್ಲಿ ನಡೆದಿದೆ.

ಸುಷ್ಮಾ (23) ಮೃತ ಮಹಿಳೆ. ತಮ್ಮ ಮಗಳ ಸಾವಿಗೆ ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಮೃತ ಮಹಿಳೆಯ ಪೋಷಕರು ಆರೋಪ ಮಾಡಿದ್ದು, ಈ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲಸ ಮುಗಿಸಿಕೊಂಡು ಸೋಮವಾರ ಸಂಜೆಗೆ ಮನೆಗೆ ಬಂದಿರುವ ಸುಷ್ಮಾ ಅವರು ಬಳಿಕ ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ಸುಷ್ಮಾ ಮೂಲತಃ ಮಧುಗಿರಿ ತಾಲೂಕಿನವರಾಗಿದ್ದು, 2015ರಲ್ಲಿ ಗ್ರಾಮ ಲೆಕ್ಕಿಗ ಹುದ್ದೆಗೆ ಆಯ್ಕೆಯಾಗಿದ್ದ ಅವರು ಕೆ.ಆರ್.ಪುರ ತಾಲೂಕು ಕಚೇರಿಯಲ್ಲಿ ಪ್ರೊಬೆಷನರಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತಳ ಕೊಠಡಿಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಗಳ ಸಾವು ಕುರಿತಂತೆ ಮಾತನಾಡಿರುವ ರಂಗನಾಥ್ ಅವರು, ಯಾವುದೇ ಕಾರಣಗಳಿಲ್ಲದೆ, ನನ್ನ ಮಗಳನ್ನು ಎರಡು ಬಾರಿ ವರ್ಗಾವಣೆ ಮಾಡಲಾಗಿತ್ತು. ಗುಮಾಸ್ತನ ರೀತಿಯ ಕೆಲಸವನ್ನು ಆಕ್ಗೆ ನೀಡಲಾಗಿತ್ತು. ಸೋಮವಾರ ರಾತ್ರಿ 8.30ರ ಸುಮಾರಿಗೆ ಮಗಳು ನನಗೆ ಕರೆ ಜೋರಾಗಿ ಅಳುತ್ತಿದ್ದಳು. ಹಿರಿಯ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಪೋನ್ ಕಟ್ ಮಾಡಿದ್ದಳು. ಕೂಡಲೇ ನನ್ನ ಪತ್ನಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದೆ, ಆದರೆ, ಈ ವೇಳೆ ಆಕೆ ದೇವಸ್ಥಾನಕ್ಕೆ ಹೋದಿದ್ದಳು. ಮನೆಗೆ ಬರುವಷ್ಟರಲ್ಲಿ ಮಗಳು ನೇಣಿಗೆ ಶರಣಾಗಿದ್ದಳು.

ದೂರಿನಲ್ಲಿ ಸುಷ್ಮಾ ಅವರ ತಂದೆ ಹಿರಿಯ ಅಧಿಕಾರಿಯೊಬ್ಬರನ್ನು ಹೆಸರನ್ನು ಸೂಚಿಸಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಸ್ತುತ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com