ಮಾ.1ರಿಂದ ಮಂಗಳೂರು-ಬೆಂಗಳೂರು ಹಗಲು ರೈಲು ಸಂಚಾರ ಆರಂಭ?

ಬಜೆಟ್‌ನಲ್ಲಿ ಘೋಷಣೆಯಾದ ಮಂಗಳೂರು-ಬೆಂಗಳೂರು ಹಗಲು ರೈಲು ಮಾರ್ಚ್ 1ರಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಂಗಳೂರು: ಬಜೆಟ್‌ನಲ್ಲಿ ಘೋಷಣೆಯಾದ ಮಂಗಳೂರು-ಬೆಂಗಳೂರು ಹಗಲು ರೈಲು ಮಾರ್ಚ್ 1ರಿಂದ ಆರಂಭವಾಗಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಭಾರತೀಯ ರೈಲ್ವೆ ಇಲಾಖೆ, 2014ರಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹಗಲು ರೈಲು ಆರಂಭಿಸಲು ನಿರ್ಧರಿಸಿತ್ತು. ಆದರೆ, ಇದೀಗ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರು ಹಗಲು ರೈಲು ಆರಂಭವಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಹಗಲು ರೈಲು ಕಾರ್ಯಾಚರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿ ಹಲವು ಬಾರಿ ರೈಲ್ವೆ ಇಲಾಖೆ ಸಂಘದವರಿಗೆ ನಿರಾಸೆ ಮೂಡಿಸಿತ್ತು. ಇದೀಗ ನ್ಯಾಯಾಧೀಶರು ಎಚ್ಚರಿಕೆ ನೀಡಿ ರೈಲ್ವೆ ಕಾರ್ಯಾಚರಣೆ ಮಾರ್ಚ್ 31, 2017ರ ಮೊದಲು ಆರಂಭಿಸುವಂತೆ ಹೇಳಿದರು. ಇದೀಗ ಅದು ಆರಂಭವಾಗುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com