ಅಗ್ನಿ ದುರಂತದ 7 ವರ್ಷಗಳ ಬಳಿಕ ಕಾರ್ಲ್​ಟನ್ ಟವರ್ಸ್ ಮತ್ತೆ ಆರಂಭ!

ಹಳೇ ಮದ್ರಾಸ್ ರಸ್ತೆಯ ಪ್ರಮುಖ ವಾಣಿಜ್ಯ ವಹಿವಾಟಿನ ಕಟ್ಟಡ ಕಾರ್ಲ್​ಟನ್ ಟವರ್ಸ್ ಮತ್ತೆ ಕಾರ್ಯನಿರ್ವಹಣೆಗೆ ಸಜ್ಜಾಗಿದ್ದು, ಬಿಬಿಎಂಪಿಯ ಎಲ್ಲ ಸುರಕ್ಷತಾ ನಿಯಮಗಳನ್ನು ಅನುಸರಿಸಿರುವ ಹಿನ್ನಲೆಯಲ್ಲಿ ಟವರ್ಸ್ ಪುನಾರಂಭಕ್ಕೆ ಹಸಿರು ನಿಶಾನೆ ತೋರಲಾಗಿದೆ.
ಕಾರ್ಲ್​ಟನ್ ಟವರ್ಸ್ ಮತ್ತೆ ಆರಂಭ
ಕಾರ್ಲ್​ಟನ್ ಟವರ್ಸ್ ಮತ್ತೆ ಆರಂಭ
Updated on: 

ಬೆಂಗಳೂರು: ಹಳೇ ಮದ್ರಾಸ್ ರಸ್ತೆಯ ಪ್ರಮುಖ ವಾಣಿಜ್ಯ ವಹಿವಾಟಿನ ಕಟ್ಟಡ ಕಾರ್ಲ್​ಟನ್ ಟವರ್ಸ್ ಮತ್ತೆ ಕಾರ್ಯನಿರ್ವಹಣೆಗೆ ಸಜ್ಜಾಗಿದ್ದು, ಬಿಬಿಎಂಪಿಯ ಎಲ್ಲ ಸುರಕ್ಷತಾ ನಿಯಮಗಳನ್ನು ಅನುಸರಿಸಿರುವ ಹಿನ್ನಲೆಯಲ್ಲಿ ಟವರ್ಸ್  ಪುನಾರಂಭಕ್ಕೆ ಹಸಿರು ನಿಶಾನೆ ತೋರಲಾಗಿದೆ.

2010ರ ಫೆಬ್ರವರಿ 23ರಂದು ನಡೆದಿದ್ದ ಭೀಕರ ಅಗ್ನಿ ದುರಂತದ ಬಳಿಕ ಮತ್ತೆ ಕಾರ್ಲ್ ಟನ್ ಟವರ್ಸ್ ಕಾರ್ಯಾರಂಭಕ್ಕೆ ಸಿದ್ಧವಾಗಿದ್ದು, ಇತ್ತೀಚೆಗೆ ಅಗ್ನಿ ಮತ್ತು ತುರ್ತು ಸೇವೆಗಳ ಇಲಾಖೆ, ಚೀಫ್ ಎಲೆಕ್ಟ್ರಿಕಲ್ ಇನ್​ಸ್ಪೆಕ್ಟರ್ ಟು ದಿ  ಗವರ್ನಮೆಂಟ್ (ಸಿಇಐಜಿ) ಮತ್ತು ಬಿಬಿಎಂಪಿ ಅಧಿಕಾರಿಗಳು ಟವರ್ಸ್ ಗೆ ವಾಸಯೋಗ್ಯ ಪ್ರಮಾಣಪತ್ರ ನೀಡಿದ್ದಾರೆ. ಕಾರ್ಲ್​ಟನ್ ಟವರ್ಸ್ ಎಲ್ಲ ಸುರಕ್ಷತಾ ನಿಯಮಗಳನ್ನು ಅನುಸರಿಸಿದ್ದು. ವಾಸಯೋಗ್ಯವಾಗಿದೆ. ತಳಮಹಡಿಯಲ್ಲಿ  ಕಾರು ರ್ಪಾಂಗ್ ವ್ಯವಸ್ಥೆ, ನೆಲಮಹಡಿಯಲ್ಲಿ ರಿಟೇಲ್ ವಹಿವಾಟಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಾರ್ಲಟನ್ ಟವರ್ಸ್ ಮಾಲೀಕರ ಸಮಿತಿ ಮಾಜಿ ಅಧ್ಯಕ್ಷ ಗಿರಿರಾಜ್ ಸದಾಶಿವ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಟ್ಟಡದಲ್ಲಿ ಬಿಬಿಎಂಪಿಯ ಎಲ್ಲ ನಿರ್ದೇಶನಗಳನ್ನು ಅನುಸರಿಸಲಾಗಿದ್ದು, ಹಲವು ಹೆಚ್ಚುವರಿ ಉಪಕ್ರಮಗಳನ್ನು ಕೂಡ ಕೈಗೊಳ್ಳಲಾಗಿದೆ. ಕಟ್ಟಡದ ಎಲ್ಲ ಮೂರು ದ್ವಾರಗಳು ಆರು ಮೀಟರ್​ಗಳ ಅಗಲವಿದ್ದು, ತುರ್ತು ಸಂದರ್ಭದಲ್ಲಿ  ಅಗ್ನಿಶಾಮಕ ಪಡೆ ವಾಹನಗಳು ಪ್ರವೇಶಿಸಲು ಅನುಕೂಲವಾಗುವಂತಿವೆ ಎಂದು ಸಮಿತಿ ಹಿಂದಿನ ಅಧ್ಯಕ್ಷೆ ರೇಖಾ ಹ್ಯಾಮಿಲ್ಟನ್ ತಿಳಿಸಿದ್ದಾರೆ.

ಕಟ್ಟಡಕ್ಕೆ ಹೊಸ ಕೇಬಲ್, ಪ್ಯಾನಲ್ ಮತ್ತು ಬಸ್​ಬಾರ್ ಸಿಸ್ಟಂನೊಂದಿಗೆ ಕಟ್ಟಡದ ಒಳಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಸಬ್-ಸ್ಟೇಷನ್​ ಗೆಹೊಸ ಗ್ರೂಪ್ ಕಂಟ್ರೋಲ್ ವ್ಯಾಕ್ಯೂಂ ಸರ್ಕ್ಯೂಟ್ ಬ್ರೇಕರ್ (ವಿಸಿಬಿ)  ಅಳವಡಿಸಲಾಗಿದೆ. ವಿದ್ಯುತ್ ಏರಿಳಿತದ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ವಿದ್ಯುತ್ ಸ್ಥಗಿತಗೊಳ್ಳುವ ವ್ಯವಸ್ಥೆ ಕೂಡ ಅಲವಡಿಸಲಾಗಿದೆ ಎಂದು ಸಮಿತಿ ಜಂಟಿ ಕಾರ್ಯದರ್ಶಿ ರಾಜೇಶ್ ಸಕಲ ಹೇಳಿದರು. ಸುದ್ದಿಗೋಷ್ಠಿ ವೇಳೆ  ಸಮಿತಿ ಮಾಜಿ ಕಾರ್ಯದರ್ಶಿ ಸಿ.ವಿ. ಗೋವರ್ಧನ್, ಸಮಿತಿಯ ಕಾರ್ಯದರ್ಶಿ ಜೋಸೆಫ್ ಥಾಮಸ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com