ಆರು ವರ್ಷಗಳ ಹಿಂದೆ ಅಮ್ಮ ಅನಾರೋಗ್ಯದಿಂದ ಮೃತಪಟ್ಟರು. ಅವರ ಸಾವಿನ ಆಘಾತದಲ್ಲಿದ್ದ ಅಕ್ಕ, ದಿನ ಕಳೆದಂತೆ ಅದೇ ನೋವಿನಲ್ಲಿ ಖಿನ್ನತೆಗೆ ಒಳಗಾದಳು. ಮನೆಯಲ್ಲಿ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಬಿಸಾಡುತ್ತ, ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ, ಮಾನಸಿಕ ಅಸ್ವಸ್ಥೆಯಂತೆ ವರ್ತಿಸಲು ಆರಂಭಿಸಿದಳು. ಅಕ್ಕನನ್ನು ನೋಡಿಕೊಳ್ಳಲು ನಾನು ಅಥವಾ ಅಪ್ಪ ಇರಲೇಬೇಕಿತ್ತು. ಒಂದು ಕ್ಷಣ ಒಂಟಿಯಾಗಿ ಬಿಟ್ಟರೂ, ಏನಾದರೊಂದು ಅನಾಹುತ ಮಾಡಿರುತ್ತಿದ್ದಳು.