ರಾಜ್ಯ

ಭಾರತದ ಜನರ ಧ್ವನಿ ಕಸಿದುಕೊಳ್ಳುವುದೇ ಮೋದಿ, ಆರ್ ಎಸ್ ಎಸ್ ಉದ್ದೇಶ: ರಾಹುಲ್ ಗಾಂಧಿ

ರಾಜ ಸಂಪೂರ್ಣವಾಗಿ ಬೆತ್ತಲಾಗಿದ್ದಾನೆ, ಆದರೆ ಅದನ್ನು ಆತನಿಗೆ ಹೇಳುವ ಧೈರ್ಯ ಯಾರು ಮಾಡುತ್ತಿಲ್ಲ ....

ಭಾರತದ ಜನರ ಧ್ವನಿ ಕಸಿದುಕೊಳ್ಳುವುದೇ ಮೋದಿ, ಆರ್ ಎಸ್ ಎಸ್ ಉದ್ದೇಶ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :
ಬೆಂಗಳೂರು:  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ, 
ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 126ನೇ ಜಯಂತಿ ಅಂಗವಾಗಿ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಸಿದ್ದಾರೆ. ವಾಸ್ತವದಲ್ಲಿ  ದೃಢವಾದ ನಂಬಿಕೆ ಇಟ್ಟುಕೊಳ್ಳಿ,  ಏಕೆಂದರೆ ಯಾವುದೇ ಸಮಯದಲ್ಲಿ ನಿಮ್ಮ ಕತ್ತು ಹಿಸುಕಬಹುದು ಎಂದು ಆಡಾಲ್ಫ್ ಹಿಟ್ಲರ್ ಹೇಳಿದ್ದಾನೆ. ಇದೆಲ್ಲವೂ ನಮ್ಮ ಸುತ್ತಮುತ್ತ ನಡೆಯುತ್ತಿದೆ ಎಂದು ಹೇಳಿದ್ದಾರೆ.  
ಬಿಜೆಪಿ ಮತ್ತು ಆರ್‌ಎಸ್‌ಎಸ್‌ ದೇಶದ ಜನರನ್ನು ದೋಚುತ್ತಿವೆ. ಜನರ ಮತ ಮತ್ತು ಅಧಿಕಾರಗಳನ್ನು ದೋಚುವ ಈ ಪ್ರಯತ್ನದಿಂದಾಗಿ ಪ್ರತಿ ಭಾರತೀಯ ಪ್ರಜೆಯೂ ತನ್ನ ಧ್ವನಿ ಳೆದುಕೊಂಡಿದ್ದಾನೆ. ದೇಶದ ಜನರ ಧ್ವನಿ ಕಿತ್ತುಕೊಳ್ಳುವುದೇ ಬಿಜೆಪಿಯ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ವಾಗ್ಧಾಳಿ ನಡೆಸಿದರು. 
ಬಿಜೆಪಿ ಅಧಿಕಾರಕ್ಕೆ ಬಂದು ಜನರನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುತ್ತಿದೆ. ರಾಜ ಸಂಪೂರ್ಣವಾಗಿ ಬೆತ್ತಲಾಗಿದ್ದಾನೆ, ಆದರೆ ಅದನ್ನು ಆತನಿಗೆ ಹೇಳುವ ಧೈರ್ಯ ಯಾರು ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.