ಕೊಪ್ಪಳ: ಕೊಪ್ಪಳದಿಂದ ತೆರಳಿದ್ದ ಮುಸ್ಲಿಂ ಮಹಿಳೆಗೆ ಸೌದಿ ಅರೇಬಿಯಾದಲ್ಲಿ ಕಿರುಕುಳ ನೀಡಲಾಗಿದೆ. ಒನ್ ಬಾಬಾ ಜಾನ್ ಎಂಬುವವರ ಪತ್ನಿ ಚಾಂದ್ ಸುಲ್ತಾನಾ ಅವರಿಗೆ ಸೌದಿ ಅರೇಬಿಯಾದಲ್ಲಿ ಚಿತ್ರ ಹಿಂಸೆ ಗೆ ಗುರಿಯಾಗಿದ್ದಾರೆ.
ಬಾಬಾ ಜಾನ್ ಪತ್ನಿ ಸೇರಿದಂತೆ ಹಲವು ಮುಸ್ಲಿಂ ಮಹಿಳೆಯರು ಸೌದಿಯಲ್ಲಿ ಕುರಾನ್ ಪಠಣ ಮತ್ತು ಅರೇಬಿಕ್ ಶಿಕ್ಷಣ ಕಲಿಸುವ ಕೆಲಸ ಕೊಡಿಸುವುದಾಗಿ ಮಂಗಳೂರಿನ ಶಂಶೀರ್ ಎಂಬ ಏಜೆಂಟ್ ಒಬ್ಬ ತಿಳಿಸಿದ್ದ. ಇದಕ್ಕೆ ಮಾಸಿಕ ರು 40 ಸಾವಿರ ವೇತನ ಕೊಡಿಸುವುದಾಗಿಯೂ ನಂಬಿಸಿದ್ದ. ಮೂರು ತಿಂಗಳ ಹಿಂದೆ ಮಹಿಳೆಯನ್ನು ಕರೆದೊಯ್ಯದಿದ್ದ.
ಆದರೆ, ಬಳಿಕ ಅವರು ಕುಟುಂಬದ ಸಂಪರ್ಕ ಕಳೆದುಕೊಂಡಿದ್ದಾರೆ. ಆದರೆ ಪತಿಗೆ ಕರೆ ಮಾಡಿದ್ದ ಬಾಬಾ ಜಾನ್ ಪತ್ನಿ ಸುಲ್ತಾನಾ, ತಮ್ಮನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದು, ಆಹಾರ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಬಾಬಾ ಜಾನ್ ಅವರು ಈ ವಿಚಾರವನ್ನು ಸಂಸದ ಸಂಗಣ್ಣ ಕರಡಿ ಅವರ ಗಮನಕ್ಕೆ ತಂದಿದ್ದು, ತಾವು ಕೂಡಲೇ ವಿದೇಶಾಂಗ ಸಚಿವರೊಂದಿಗೆ ಚರ್ಚಿಸಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ.