ಬೆಂಗಳೂರು: ಅಶ್ಲೀಲ ವಿಡಿಯೋ ತೋರಿಸಿ ಸೆಕ್ಸ್ ಗೆ ಒತ್ತಡ, ಪತಿ ವಿರುದ್ಧ ಪತ್ನಿ ದೂರು

ಬೆಂಗಳೂರಿನ 24 ವರ್ಷದ ಮಹಿಳೆಯೊಬ್ಬರು ತನ್ನ ಪತಿ ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳಲ್ಲಿ ಅಶ್ಲೀಲ ವಿಡಿಯೋ ತೋರಿಸಿ,....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರಿನ 24 ವರ್ಷದ ಮಹಿಳೆಯೊಬ್ಬರು ತನ್ನ ಪತಿ ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳಲ್ಲಿ ಅಶ್ಲೀಲ ವಿಡಿಯೋ ತೋರಿಸಿ, ಅದರಂತೆಯೇ ಲೈಂಗಿಕ ಕ್ರಿಯೆ ನಡೆಸುವಂತೆ ತನ್ನ ಮೇಲೆ ಒತ್ತಡ ಹಾಕುತ್ತಿರುವುದಾಗಿ ಆರೋಪಿಸಿ ತನ್ನ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂತ್ರಸ್ಥ ಮಹಿಳೆ ಬೆಂಗಳೂರಿನ ಮಾರೆನಹಳ್ಳಿಯ ನಿವಾಸಿಯಾಗಿದ್ದು, ನಿರುದ್ಯೋಗಿಯಾಗಿರುವ ಚಾಮರಾಜಪೇಟೆ ನಿವಾಸಿ ಶ್ರೆಯಸ್ ಎಂಬುವವರನ್ನು ಕಳೆದ ವರ್ಷ ಏಪ್ರಿಲ್ 17ರಂದು ಮದುವೆಯಾಗಿದ್ದು, 4 ಲಕ್ಷ ರು ವರದಕ್ಷಿಣೆ, ಚಿನ್ನಾಭರಣ ಪಡೆದಿದ್ದಾನೆ ಎನ್ನಲಾಗಿದೆ.
ಮದುವೆಯಾದ ನಂತರ ಯಲಹಂಕದ ಹೋಟೆಲ್ ವೊಂದರಲ್ಲಿ ರೂಂ ಬುಕ್ ಮಾಡಿದ್ದ ಶ್ರೆಯಸ್, ಮೊದಲ ರಾತ್ರಿಯೇ ತಾನು ಕುಡಿದು, ಪತ್ನಿಗೆ ಮದ್ಯ ಕುಡಿಯುವಂತೆ ಒತ್ತಾಯಿಸಿದ್ದಲ್ಲದೆ, ಅಮಲಿನಲ್ಲಿ ಮೃಗೀಯವಾಗಿ ವರ್ತಿಸಿ ಲೈಂಗಿಕ ಹಿಂಸೆ ನೀಡಿದ್ದಾನೆ ಎಂದು ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.
ಶ್ರೆಯಸ್ ಕೆಲ ದಿನಗಳಿಂದ ಅಶ್ಲೀಲ ವಿಡಿಯೋ ತೋರಿಸಿ ಅದರಂತೆ ಸೆಕ್ಸ್ ಗೆ ಬಲವಂತ ಮಾಡಿದ್ದು, ವಿರೋಧಿಸಿದಾಗ ಕಿರುಕುಳ ನೀಡಿದ್ದಾನೆ. ಅಲ್ಲದೆ ಫಸ್ಟ್ ನೈಟ್ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ಆರೋಪಿಸಲಾಗಿದೆ.
ಶ್ರೆಯಸ್ ನ ಈ ವರ್ತನೆಯಿಂದ ಬೇಸತ್ತ ಪತ್ನಿ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com