ಉ.ಪ್ರದೇಶ ಚುನಾವಣೆ: ಕರ್ತವ್ಯನಿರತ ಕಲಬುರಗಿ ಎಎಸ್ಐ ಅಮೃತ್ ಅಪಘಾತದಲ್ಲಿ ಸಾವು

Published On :
ಕಲಬುರಗಿ: ಉತ್ತರಪ್ರದೇಶ ಚುನಾವಣೆ ಹಿನ್ನಲೆಯಲ್ಲಿ ಕರ್ತವ್ಯ ನಿರ್ವಹಿಸಲು ಹೋಗಿದ್ದ ಮೀಸಲು ಪಡೆಯ ಎಎಸ್ಐ ಅಮೃತ್. ಬಿ ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೃತಪಟ್ಟ ಅಮೃತ್ (50) ಅವರು ಕಲಬುರಗಿಯ 6ನೇ ಮೀಸಲು ಪೊಲೀಸ್ ಪಡೆಯ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಅಂತ್ಯಗೊಂಡ ಹಿನ್ನಲೆಯಲ್ಲಿ ಕರ್ತವ್ಯ ಮುಗಿಸಿ ಮರಳಿ ಬರುವಾಗ ವಾರಣಾಸಿ ಸಮೀಪದ ಜೇಹಾನ್ಪುರದ ಬಳಿ ವಾಹನದಲ್ಲಿ ಬರುವಾಗ ಲಾರಿಯೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ದುರಂತ ಸಂಭವಿಸಿದೆ. ದುರಂತ ಸಂಭವಿಸುವ ವೇಳೆ ಅಮೃತ್ ಅವರೊಂದಿಗೆ ಮತ್ತಿಬ್ಬರು ಪೊಲೀಸ್ ಸಿಬ್ಬಂದಿಗಳೂ ಕೂಡ ಇದ್ದು, ಈ ಇಬ್ಬರೂ ಸಿಬ್ಬಂದಿಗಳೂ ಕೂಡ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಗೋವಾ ಮತ್ತು ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಿಮಿತ್ತ ಜನವರಿ 21 ರಂದು ಕಲಬುರಗಿಯಿಂದ ಒಟ್ಟು 8 ಕ್ಯಾಂಪ್ ಗಳಲ್ಲಿ 90 ಜನ ಸಿಬ್ಬಂದಿಗಳು ಗೋವಾ ರಾಜ್ಯಕ್ಕೆ ತೆರಳಿದ್ದರು. ಗೋವಾ ಚುನಾವಣೆ ಬಳಿಕ ಉತ್ತರಪ್ರದೇಶಕ್ಕೆ ತೆರಳಿದ ತಂಡಗಳು ಪ್ರತ್ಯೇಕವಾಗಿ ಸೇವೆ ನಿಭಾಯಿಸುತ್ತಿದ್ದರು.
ಮಾರ್ಚ್ 8 ರಂದು ಈ ದುರಂತ ಸಂಭವಿಸಿದ್ದು, ಗುರುವಾರ ರಾತ್ರಿ ಅಮೃತ್ ಅವರ ಪಾರ್ಥೀವ ಶರೀರವನ್ನು ಕಲಬುರಗಿಗೆ ತರಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


