ಬೆಂಗಳೂರು: ಸೆಕ್ಸ್‌ಗೆ ನಿರಾಸಕ್ತಿ ತೊರಿದ ಗಂಡನನ್ನು ಪ್ರಿಯಕರನಿಂದ ಹತ್ಯೆ ಮಾಡಿಸಿದ ಪತ್ನಿ

ಸೆಕ್ಸ್‌ಗೆ ಪತಿ ನಿರಾಸಕ್ತಿ ತೋರಿಸಿದ್ದರಿಂದ ನೊಂದ ಪತ್ನಿ ಪ್ರಿಯಕರನಿಗೆ ಸುಪಾರಿ ಕೊಟ್ಟು ಗಂಡನನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ...
ಸೆಕ್ಸ್
ಸೆಕ್ಸ್
Updated on: 
ಬೆಂಗಳೂರು: ಸೆಕ್ಸ್‌ಗೆ ಪತಿ ನಿರಾಸಕ್ತಿ ತೋರಿಸಿದ್ದರಿಂದ ನೊಂದ ಪತ್ನಿ ಪ್ರಿಯಕರನಿಗೆ ಸುಪಾರಿ ಕೊಟ್ಟು ಗಂಡನನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
ಇದೇ ವೇಳೆ ಪತ್ನಿ ಗಂಡನನ್ನು ಕೊಲೆ ಮಾಡಿಸಿ ನಂತರ ಪೊಲೀಸ್ ಠಾಣೆಗೆ ಹೋಗಿ ಪತಿ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದಳು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು 27 ವರ್ಷದ ಪತ್ನಿ ನೀಲಾಳನ್ನು ಬಂಧಿಸಿದ್ದಾರೆ. 
ಆರೋಪಿ ಮಹಿಳೆ ನೀಲಾಗೆ ಪ್ರದೀಪ್ ಎಂಬಾತನ ಜತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಪತಿ ಮಧುಸೂದನ್ ನನ್ನು ಮುಗಿಸಲು ಪ್ರಿಯಕರ ಪ್ರದೀಪ್ ಜತೆ ಸಂಚು ರೂಪಿಸಿದ್ದಳು. ಸಂಚಿನಂತೆ ಅಕ್ಟೋಬರ್ 12ರಂದು ರಾತ್ರಿ ಮಧುಸೂದನ್ ನನ್ನು ಕ್ಯಾಂಟರ್ ನಲ್ಲಿ ಕರೆದೊಯ್ದಿದ್ದ ಪ್ರದೀಪ್ ದಾರಿ ಮಧ್ಯೆ ಸ್ನೇಹಿತರಾದ ರಂಜಿತ್ ಮತ್ತು ಹರಿಪ್ರಸಾದ್ ನನ್ನು ಕ್ಯಾಂಟರ್ ಗೆ ಹತ್ತಿಸಿಕೊಂಡು ಬಳಿಕ ಮೂವರು ಸೇರಿ ಮಧುಸೂದನ್ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಕೇಗೇರಿ ಬಳಿಯ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು. 
ಕೊಲೆ ಮಾಡಿದ ನಂತರ ಪ್ರದೀಪ್ ನೀಲಾಗೆ ಕರೆ ಮಾಡಿ ನಿನ್ನ ಗಂಡನ ಕಥೆ ಮುಗಿಸಿದ್ದೇವೆ ಎಂದು ಹೇಳಿದ್ದ. ಮರುದಿನ ರಾಜಗೋಪಾಲನಗರ ಪೊಲೀಸ್ ಠಾಣೆಗೆ ಹೋಗಿದ್ದ ನೀಲಾ ಗಂಡ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದಳು. ತನಿಖೆ ಕೈಗೊಂಡಿದ್ದ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಪತಿ ನಾಲ್ಕು ವರ್ಷದಿಂದ ಜತೆಯಲ್ಲಿ ಲೈಂಗಿಕತೆ ನಡೆಸುತ್ತಿಲ್ಲ ಹೀಗಾಗಿ ಹತ್ಯೆ ಮಾಡಿಸಿರುವುದಾಗಿ ಆರೋಪಿ ನೀಲಾ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com