ಕಲಬುರಗಿಯ ಅಫ್ಜಲ್ ಪುರ ತಾಲ್ಲೂಕಿನ ಮಲ್ಲಾಬಾದ್ ಕ್ರಾಸ್ ಬಳಿ ಈ ಅಪಘಾತವಾಗಿದ್ದು, ಮೃತರನ್ನು ಶ್ರೀರಂಗ ಖೇಡ್ಕರ್ ಹಾಗೂ ರಮೇಶ್ ದೊಡ್ಡಮನಿ ಎಂದು ಗುರುತಿಸಲಾಗಿದೆ. ಅಪಘಾತದ ಬಗ್ಗೆ ಅಫ್ಜಲ್ ಪುರ ವೃತ್ತ ನಿರೀಕ್ಷಕ ಜೆ ಹೆಚ್ ಇನಾಮ್ದಾರ್ ಅವರು ಮಾಹಿತಿ ನೀಡಿದ್ದು, ವಕೀಲರು ತಮ್ಮ ಕಕ್ಷೀದಾರರನ್ನು ಕರೆತರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಗೆ ಡಿಕ್ಕಿಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ವಕೀಲರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಕ್ಷೀದಾರರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.