ರಾಜ್ಯ

ಧಾರಾವಾಹಿ ಗೀಳಿಗೆ ಮತ್ತೊಂದು ಬಲಿ: ಬೆಂಕಿ ಹಚ್ಚಿಕೊಂಡು 7 ವರ್ಷದ ಬಾಲಕಿ ಸಾವು

ಧಾರಾವಾಹಿ ಗೀಳಿಗೆ ಮತ್ತೊಂದು ಬಲಿ: ಬೆಂಕಿ ಹಚ್ಚಿಕೊಂಡು 7 ವರ್ಷದ ಬಾಲಕಿ ಸಾವು
ಮೃತ ಬಾಲಕಿ ಪ್ರಾರ್ಥನಾ
Published On :
ದಾವಣಗೆರೆ: ಧಾರಾವಾಹಿ ಗೀಳಿಗೆ ಪುಟ್ಟ ಬಾಲಕಿಯೊಬ್ಬಳು ಬಲಿಯಾಗಿದ್ದು, ಕನ್ನಡ ವಾಹಿನಿಯ ಧಾರಾವಾಹಿಯೊಂದರ ಪಾತ್ರದ ಅನುಕರಣೆ ಮಾಡಲು ಹೋಗಿ 7 ವರ್ಷದ ಪುಟಾಣಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾಳೆ.
ಕರ್ನಾಟಕದ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ವಾಹಿನಿಯೊಂದರಲ್ಲಿ ಮೂಡಿ ಬರುತ್ತಿದ್ದ ಧಾರಾವಾಹಿಯೊಂದನ್ನು ನೋಡಿ ಅದರಲ್ಲಿನ ಪಾತ್ರ ಬೆಂಕಿಹಚ್ಚಿಕೊಳ್ಳುವುದನ್ನು ಅನುಕರಿಸಿ ಏಳು ವರ್ಷದ   ಪ್ರಾರ್ಥನಾ ಎಂಬ ಬಾಲಕಿ ಮೃತಪಟ್ಟಿದ್ದಾಳೆ.
ಮೂಲಗಳ ಪ್ರಕಾರ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಆಶ್ರಯ ಕಾಲೊನಿಯ ನಿವಾಸಿಯಾಗಳಾದ ಚೈತ್ರಾ ಮತ್ತು ಮಂಜುನಾಥ್‌ ದಂಪತಿಯ ಪುತ್ರಿ 7 ವರ್ಷದ ಪ್ರಾರ್ಥನಾ ಎಂಬ ಬಾಲಕಿ ಖ್ಯಾತ ಮನರಂಜನಾ  ವಾಹಿನಿಯೊಂದರಲ್ಲಿ ಬರುವ ಧಾರಾವಾಹಿಯೊಂದರ ಪ್ರಭಾವಕ್ಕೆ ಒಳಗಾಗಿದ್ದಳು. ಕಳೆದ ನವೆಂಬರ್ 11ರಂದು ಬಾಲಕಿ ಆ ಧಾರಾವಾಹಿಯೊಂದರ ಪಾತ್ರದ ಅನುಕರಣೆ ಮಾಡಲು ಹೋಗಿ ಮೈಗೆ ಬೆಂಕಿ ಹಚ್ಚಿಕೊಂಡಿದ್ದಾಳೆ.  ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಪ್ರಾರ್ಥನಾಳನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಪ್ರಾರ್ಥನಾ ಸಾವನ್ನಪ್ಪಿದ್ದಾಳೆ. ಪ್ರಾರ್ಥನಾ ಸ್ಥಳೀಯ ಸೇಂಟ್‌ ಮೇರಿಸ್‌ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.